ಖಾನಾಪುರದಲ್ಲಿ ಉಮೇಶ ಕತ್ತಿಗೆ ಶೃದ್ಧಾಂಜಲಿ ; ಸಂದರ್ಭದ ಅರಿವಿಲ್ಲದೆ ನಾಲಿಗೆ ಹರಿಬಿಟ್ಟ ಮಾಜಿ ಶಾಸಕ ಅರವಿಂದ ಪಾಟೀಲ
ನಾಲಿಗೆ ಹರಿಬಿಟ್ಟ ಅರವಿಂದ ಪಾಟೀಲ
ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಈಚೆಗೆ ಬಿಜೆಪಿ ಸೇರಿರುವ ಮಾಜಿ ಶಾಸಕ ಅರವಿಂದ ಪಾಟೀಲ ಶೃದ್ಧಾಂಜಲಿ ಸಭೆಯ ಸಂದರ್ಭವನ್ನು ಅರಿಯದೆ ಕ್ಷುಲ್ಲಕವಾಗಿ ನಡೆದುಕೊಂಡಿದ್ದಾರೆ.
ಸಭೆಗೆ ಆಗಮಿಸಿದ್ದ ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಖಾನಾಪುರ ಉಸ್ತುವಾರಿ ಡಾ. ಸೋನಾಲಿ ಸರ್ನೋಬತ್ ಅವರನ್ನು ಉದ್ದೇಶಿಸಿ ತೀರಾ ಅವಾಚ್ಯವಾಗಿ ಮಾತವಾಡಿದ್ದಾರೆ. ಸಾರ್ವಜನಿಕರ ಎದುರೇ ಮಹಿಳೆಯೊಬ್ಬರಿಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ ಸಂಸ್ಕೃತಿಯನ್ನು ತೋರಿಸಿದ್ದಾರೆ.
ಎಂಇಎಸ್ ನಿಂದ ಬಂದಿರುವ ಅರವಿಂದ ಪಾಟೀಲ ಅವರಿಗೆ ಖಾನಾಪುರ ಬಿಜೆಪಿಯಲ್ಲಿ ಯಾವುದೇ ಬೆಲೆ ಸಿಗುತ್ತಿಲ್ಲ. ಬಿಜೆಪಿಯ ಯಾರೊಬ್ಬರೂ ಅವರನ್ನು ಗೌರವದಿಂದ ಕಾಣುತ್ತಿಲ್ಲ. ಇದರಿಂದಾಗಿ ತೀವ್ರ ಮಾನಸಿಕ ತೊಳಲಾಟಕ್ಕೆ ಸಿಲುಕಿರುವ ಅವರು, ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ. ನಾವು ತಾಲೂಕಿನವರು ಸಭೆ ಮಾಡಿಕೊಳ್ಳುತ್ತೇವೆ. ನಮ್ಮ ತಾಲೂಕಿನೊಳಗೆ ನಿಮಗೆ ಅವಕಾಶವಿಲ್ಲ ಎಂದು ನಿಂದಿಸಿದ್ದಾರೆ.
ಜೊತೆಗೆ ತಾಲೂಕು ಅಧ್ಯಕ್ಷರನ್ನು ಉದ್ದೇಶಿಸಿ, ಅವರನ್ನು ಇಲ್ಲಿಗೇಕೆ ಆಹ್ವಾನಿಸಿದ್ದೀರಿ. ಬೇರೆ ತಾಲೂಕಿನವರಿಗೆ ಇಲ್ಲೇನು ಕೆಲಸ ಎಂದು ಅರವಿಂದ ಪಾಟೀಲ ದಬಾಯಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಡಾ.ಸೋನಾಲಿ ಸರ್ನೋಬತ್, ನನಗೆ ಖಾನಾಪುರ ತಾಲೂಕು ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ನಾನು ಬಿಜೆಪಿಯಲ್ಲಿ ಮೊದಲಿನಿಂದಲೂ ಇದ್ದೇನೆ. ನಿಮ್ಮ ಹಾಗೆ ಈಗ ಬಂದವನಲ್ಲ. ನನಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಜೊತೆಗೆ ಇದು ಶೃದ್ಧಾಂಜಲಿ ಸಭೆ. ಯಾರೂ ಭಾಗವಹಿಸಬಾರದೆಂದೇನೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಡಾ.ಸೋನೀಲಿ ಸರ್ನೋಬತ್ ಖಾ್ನಾಪುರ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಮಾಡುತ್ತಿರುವ ಜನೋಪಯೋಗಿ ಕೆಲಸಗಳಿಂದ ಮತ್ತು ತಮಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವ ಕುರಿತು ಅನುಮಾನ ಹೊಂದಿರುವ ಅರವಿಂದ ಪಾಟೀಲ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿರುವುದು ಬಿಜೆಪಿಗೆ ಇರುಸು ಮುರಿಸನ್ನುಂಟು ಮಾಡಿದೆ.
https://pragati.taskdun.com/politics/rahul-gandhit-shirtcongress-reactedsharply-to-bjps-tweet/
https://pragati.taskdun.com/politics-2/aravind-patil-jumps-into-bjp-yard/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ