Karnataka News

*ಭೀಕರ ರಸ್ತೆ ಅಪಘಾತ: ಆಟೋದಲ್ಲಿದ್ದ 7 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಟ್ರಕ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವನ್ನಪ್ಪಿರುವ ದಾರುಣ ಘಟನೆ ಪಾಟ್ನಾದಲ್ಲಿ ನಡೆದಿದೆ.

ಆಟೋದಲ್ಲಿ ಹತ್ತು ಜನರು ಪ್ರಯಾಣಿಸುತ್ತಿದ್ದರು. ಆಟೋ ಹಗೂ ಟ್ರಕ್ ನಡುವೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ 7 ಜನರು ಮೃತ ಪಟ್ಟಿದ್ದಾರೆ. ಆಟೋ ಪಾಟ್ನಾದಿಂದ ಮಸೌರಿಯಿಂದ ನೌಬತ್ ಪುರ ಕಡೆಗೆ ಆಟೋ ತೆರಳುತ್ತಿತ್ತು.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button