ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಚನ್ನಮ್ಮನ ಕಿತ್ತೂರಿನಲ್ಲಿಯೆ ಸ್ಥಾಪಿಸಬೇಕು ಎಂದು ಮಂಗಳವಾರ “ಪಕ್ಷಾತೀತ ಪ್ರತಿಭಟನೆ” ಮಾಡಲು ನಿರ್ಧರಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಜಿ ಜಿ.ಪಂ ಸದಸ್ಯ ಬಾಬಾಸಾಹೇಬ್ ಪಾಟೀಲ ಹಾಗೂ ರಾಜಾಸಲೀಮ್ ಕಾಶೀಮನವರ ಜಂಟಿಯಾಗಿ ಮಾತನಾಡಿ, ಸೆಪ್ಟೆಂಬರ್ 22 ರಂದು ಮುಂಜಾನೆ 11 ಘಂಟೆಗೆ ರಾಷ್ಟ್ರಮಾತೆ ಕಿತ್ತೂರು ಚನ್ನಮ್ಮನ ಕರ್ಮಭೂಮಿ ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು ಎಂದು ಪಟ್ಟಣದ ಅರಳಿಕಟ್ಟಿಯಿಂದ ತಹಶಿಲ್ದಾರ ಕಛೇರಿವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು, ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಕಿತ್ತೂರು ನಾಡಿನ ಸಮಸ್ತ ವಿದ್ಯಾರ್ಥಿಗಳು, ವಿವಿಧ ಸಂಘ-ಸOಸ್ಥೆಗಳು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ರಾಣಿ ಚನ್ನಮ್ಮ ಸ್ಮರಣೋತ್ಸವ ಸಮೀತಿ ಅಧ್ಯಕ್ಷ ಬಸವರಾಜ ಚಿನಗುಡಿ, ನಿಂಗಪ್ಪ ಹಣಜಿ, ಎಪಿಎಂಸಿ ಸದಸ್ಯ ಸಂಗನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಸಂಘದ ಕಾರ್ಯಾಧ್ಯಕ್ಷ ರಮೇಶ ಮೋಖಾಶಿ, ಕೆಪಿಸಿಸಿ ಹಿಂದುಳಿದ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣಪ್ಪ ರಾಮರಾವ್, ಪ.ಪಂ ಸದಸ್ಯರಾದ ಕೃಷ್ಣಾ ಬಾಳೇಕುಂದ್ರಿ, ಕಿರಣ ವಾಳದ, ಅಸ್ಪಾಕ್ ಹವಾಲ್ದಾರ್, ತಾ.ಪಂ ಸದಸ್ಯ ಮುದಕಪ್ಪ ಮರಡಿ, ಸಾವಂತ ಕಿರಬನ್ನವರ, ಮಂಜು ದೊಡ್ಡಣ್ಣವರ ಮಾರುತಿ ನಾಯ್ಕರ, ಬಸವರಾಜ ಸಂಗೊಳ್ಳಿ, ಅಡಿವೆಪ್ಪ ಗೋಣಿ, ಬಸವರಾಜ ಕುದರಿಮನಿ, ಸದಸ್ಯರು, ರಾಷ್ಟ್ರೀಯ ಬಸವ ದಳ ಮತ್ತು ಬಸವ ಸೇನೆಯ ಸದಸ್ಯರು ಉಪಸ್ಥಿತರಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ