
ಪ್ರಗತಿವಾಹಿನಿ ಸುದ್ದಿ: ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ನವೀನ್ ಪತ್ನಿಯನ್ನೇ ಕೊಂದ ಪತಿ. 30 ವರ್ಷದ ಗೀತಾ ಕೊಲೆಯಾದ ಮಹಿಳೆ. ತುಮಕೂರು ಹೊರವಲಯದ ಅಂತರಸನಹಳ್ಳಿಯ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ.
ಪತ್ನಿ ಹತ್ಯೆಗೈದು ಪತಿ ನವೀನ್ ಪರಾರಿಯಾಗಿದ್ದಾನೆ. ಇಂದು ಬಾಡಿಗೆ ಹಣ ಪಡೆಯಲಿ ಮನೆಯ ಮಾಲೀಕರು ಮನೆಗೆ ಬಂದು ನೋಡಿದಾಗಲೇ ಕೊಲೆ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.