Kannada NewsKarnataka NewsLatest
*ಹಾಸ್ಟೇಲ್ ನಲ್ಲಿ ಓದುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ; ವಾರ್ಡನ್ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಹಾಸ್ಟೇಲ್ ನಲ್ಲಿದ್ದು 9 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವರು ಗರ್ಭಿಣಿಆಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಬೆಳಕಿಗೆ ಬಂದಿದೆ.
ಹಾಸ್ಟೇಲ್ ವಾರ್ಡನ್ ಬಾಲಕಿಯ ಚಲನವಲನ ಗಮನಿಸದೇ ಬೇಜವಾಬ್ದಾರಿ ವರ್ತನೆ ಹಾಗೂ ಕರ್ತವ್ಯ ಲೋಪ ಆರೋಪದಲ್ಲಿ ಹಾಸ್ಟೇಲ್ ವಾರ್ಡನ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಓ ಆದೇಶ ಹೊರಡಿಸಿದ್ದಾರೆ. ನಿವೇದಿತಾ ಅಮಾನತುಗೊಂಡ ವಾರ್ಡನ್.
ಚಿಕ್ಕಬಳ್ಳಾಪುರದ ಬಾಗೇಪಲ್ಲಿ ನಿವಾಸಿಯಾಗಿರುವ ವಿದ್ಯಾರ್ಥಿನಿ, ಮಧುಗಿರಿ ಪಟ್ಟಣದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೇಲ್ ನಲ್ಲಿದ್ದು 9ನೇ ತರಗತಿ ಓದುತ್ತಿದ್ದಳು. ಹೊಟ್ಟೆನೋವೆಂದು ವಿದ್ಯಾರ್ಥಿನಿ ತಾಯಿ ಜೊತೆಗೆ ಬಾಗೆಪಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಗ ಈಗ 7 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಸ್ಥಳೀಯ ಯುವಕನೊಬ್ಬನ ಜೊತೆ ವಿದ್ಯಾರ್ಥಿನಿ ಸಂಪರ್ಕದಲ್ಲಿದ್ದಳು, ಆತನೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.