Latest

ಮಹಿಳಾ ಕಾನ್ಸ್ ಟೇಬಲ್ ಅಪಹರಣ-ಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ; ತುಮಕೂರು: ತುಮಕೂರು ಮಹಿಳಾ ಕಾನ್ಸ್ ಟೇಬಲ್  ಕಿಡ್ನ್ಯಾಪ್ ಹಾಗೂ ಮರ್ಡರ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು,  ಪ್ರಕರಣ ಸಂಬಂಧ ಹುಳಿಯಾರು ಠಾಣೆಯ ಮಹಿಳಾ ಕಾನ್ಸ್ಟೇಬಲ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹುಳಿಯಾರು ಠಾಣೆಯ ಮಹಿಳಾ ಕಾನ್ಸ್ ಟೆಬಲ್  ಸುಧಾ ಅವರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹುಳಿಯಾರು ಠಾಣೆಯ ಲೇಡಿ ಕಾನ್ಸ್ ಟೇಬಲ್ ಎಸ್.ರಾಣಿ ಎಂಬುವವರ ಸೂಚನೆಯಂತೆ ನಿಖೇಶ್ ಹಾಗೂ ಮಂಜುನಾಥ್ ಎಂಬುವವರು ಸುಧಾ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಒಮ್ಮೆ ಸುಧಾ ಹತ್ಯೆಗೆ ಪ್ಲಾನ್ ಮಾಡಿದ್ದ ಆರೋಪಿಗಳು ಆಕೆಯನ್ನು ಸಾಗರಕ್ಕೆ ಕರೆದೊಯ್ದಿದ್ದರು. ಆದರೆ ಈ ವೇಳೆ ಸುಧಾ ಜೊತೆಯಲ್ಲಿ ಆಕೆಯ ಮಕ್ಕಳಿದ್ದಿದ್ದರಿಂದ ಕೊಲೆ ಸಂಚು ವಿಫಲವಾಗಿತ್ತು. ಬಳಿಕ ಸೆ.13ರಂದು ಸುಧಾ ಅವರನ್ನು ಚಿಕ್ಕನಾಯಕನಹಳ್ಳಿ ಶೆಟ್ಟಿಗೇಟ್ ಬಳಿ ಕರೆಸಿಕೊಂಡು ಕಾರಿನಲ್ಲಿ ಕೂರಿಸಿಕೊಂಡು ತಿಪಟೂರಿಗೆ ತೆರಳಿದ್ದಾರೆ.

ಸುಧಾ ಕಾರು ಹತ್ತುತ್ತಿದ್ದಂತೆ ಆರೋಪಿಗಳು ಸುಧಾ ಕಣ್ಣಿಗೆ ಮೂವ್ ಹಚ್ಚಿದ್ದಾರೆ. ಕಣ್ಣುರಿಯಿಂದ ಸುಧಾ ಕಣ್ಣು ಉಜ್ಜಿಕೊಳ್ಳುತ್ತಿದ್ದಂತೆ ಮನಬಂದಂತೆ ಆಕೆಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಮಹಿಲಾ ಕಾನ್ಸ್ಟೇಬಲ್ ಗಳಾಗಿದ್ದ ಸುಧಾ ಹಾಗೂ ರಾಣಿ ನಡುವೆ ಕೆಲಸದ ವಿಚಾರದಲ್ಲಿ ಮನಸ್ತಾಪವಿತ್ತು. ರಾಣಿ ಈ ಹಿಂದೆ ಕೋರ್ಟ್ ಬೀಟ್ ಮಾಡುತ್ತಿದ್ದರು. ಆದರೆ ಇತ್ತೀಚೆಗೆ  ಸುಧಾ ಕೋರ್ಟ್ ಡ್ಯೂಟಿ ತನಗೆ ಹಾಕಿಸಿಕೊಂಡಿದ್ದರು. ಇದೇ ದ್ವೇಷಕ್ಕೆ ಸುಧಾಳನ್ನು ಮುಗಿಸಲು ರಾಣಿ ಪ್ಲಾನ್ ಮಾಡಿ ಹತ್ಯೆಗೈದಿದ್ದಾಳೆ ಎಂದು ತಿಳಿದುಬಂದಿದೆ.

Home add -Advt
https://pragati.taskdun.com/politics/mp-sumalatamla-puttarajumandya/

Related Articles

Back to top button