Kannada NewsKarnataka NewsLatest

*ತುಂಗಭದ್ರಾ ನದಿಯಲ್ಲಿ ತೇಲಿಬಂದ ಮೃತದೇಹ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ರಾಜ್ಯಾದ್ಯಂತ ವರುಣಾರ್ಭಟ ಜೋರಾಗಿದ್ದು, ನದಿಗಳು ಅಪಾಯದಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಈ ನಡುವೆ ತುಂಗಭದ್ರಾ ನದಿಯಲ್ಲಿ ಮೃತದೇಹವೊಂದು ತೇಲಿ ಬಂದಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ.

ಧಾರಾಕಾರ ಮಳೆಯಿಂದಾಗಿ ತುಂಗಭದ್ರಾ ನದಿ ಅಪಾಯದಮಟ್ಟದಲ್ಲಿ ಹರಿಯುತ್ತಿದೆ. ದಾವಣಗೆರೆ ಜಿಲ್ಲೆಯ ಹರಿಹರ ನಗರದ ರಾಘವೇಂದ್ರ ಮಠದ ಬಳಿ ನದಿಯಲ್ಲಿ ಮೃತದೇಹ ತೇಲಿ ಬಂದಿದೆ.

Home add -Advt

ಪುರುಷರೊಬ್ಬರ ಮೃತದೇಹ ನದಿಯಲ್ಲಿ ತೇಲಿ ಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ನದಿಯಿಂದ ಮೇಲಕೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನಷ್ಟೇ ಮೃತದೇಹದ ಗುರುತು ಪತ್ತೆಯಾಗಬೇಕಿದೆ.


Related Articles

Back to top button