ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್: 42 ವರ್ಷದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ನಿರಂತರ 4 ವರ್ಷ ಅತ್ಯಾಚಾರಗೈದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಅಹಮದಾಬಾದ್‌ನ ಪ್ರಸಿದ್ಧ ಕೋಚಿಂಗ್ ಇನ್ಸ್ಟಿಟ್ಯೂಟ್ ಒಂದರ ವಿಜ್ಞಾನ ಶಿಕ್ಷಕ ಮಯಾಂಕ್ ದೀಕ್ಷಿತ್ ಅತ್ಯಾಚಾರಗೈದ ಆರೋಪಿ. ಈತ ವಿದ್ಯಾರ್ಥಿನಿಯೊಬ್ಬಳ ಮೇಲೆ 2016ರಿಂದ 2019ರವರೆಗೆ ನಿರಂತರ ಅತ್ಯಾಚಾರಗೈದಿದ್ದ. ಆರೋಪಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿತ್ವ ವಿಕಸನ ತರಬೇತುದಾರ !
ಆರೋಪಿ ಮಯಾಂಕ್ ದೀಕ್ಷಿತ್ ವಿಜ್ಞಾನ ಪಾಟದ ಜೊತೆಗೆ ವ್ಯಕ್ತಿತ್ವ ವಿಕಸನದ ತರಬೇತಿಯನ್ನೂ ನೀಡುತ್ತಿದ್ದ. 2016 ರ ಅವಧಿಯಲ್ಲಿ ಕೇವಲ 16 ವರ್ಷ ವಯೋಮಾನದವಳಾಗಿದ್ದ ಸಂತ್ರಸ್ತೆ ಈತನ ಮಾತಿನಿಂದ ಪ್ರಬಾವಿತಳಾಗಿದ್ದಳು. ಸಂತ್ರಸ್ತ ವಿದ್ಯಾರ್ಥಿನಿಗೆ ಈತ ಎಕ್ಸ್ಟ್ರಾ ಕ್ಲಾಸ್ ತೆಗೆದುಕೊಳ್ಳುವ ನೆಪದಲ್ಲಿ ತನ್ನ ಮನೆಗೆ ಕರೆಸಿಕೊಂಡು ಮೊದಲ ಬಾರಿಗೆ ಅತ್ಯಾಚಾರಗೈದಿದ್ದ. ಅಲ್ಲಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತ ಬಂದಿದ್ದ.
ಇತ್ತೀಚೆಗೆ ಸಂತ್ರಸ್ತ ವಿದ್ಯಾರ್ಥಿನಿ ತನಗೆ ಕುಟುಂಬದವರು ಮದುವೆ ಮಾಡಲು ನಿರ್ಣಯಿಸಿದ್ದಾರೆ ಎಂದು ತಿಳಿಸಿದಾಗ ಆರೋಪಿ ಕ್ರುದ್ಧನಾಗಿದ್ದ. ಬೇರೆಯವರನ್ನು ಮದುವೆಯಾದರೆ ತಾವಿಬ್ಬರೂ ಒಟ್ಟಿಗಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಯುವತಿ ಹೆದರಿ ಕಂಗಾಲಾಗಿದ್ದು ಖಿನ್ನತೆಗೆ ಜಾರಿದ್ದಳು. ಯುವತಿಯ ವರ್ತನೆಯಲ್ಲಾದ ಬದಲಾವಣೆಯನ್ನು ಗುರುತಿಸಿದ ಕುಟುಂಬದವರು ಸಂತೈಸಿ ಕೇಳಿದಾಗ ಸತ್ಯ ಬಹಿರಂಗಗೊಂಡಿದೆ. ಬಳಿಕ ಕುಟುಂಬದವರ ಬೆಂಬಲದೊಂದಿಗೆ ಯುವತಿ ಪೊಲೀಸ್ ದೂರು ನೀಡಿದ್ದು ಆರೋಪಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.
ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ; ASI ಅಪರಾಧಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ