ಅಮೇರಿಕದ ಖ್ಯಾತ ಕಿರುತೆರೆ ನಟಿ ಶವವಾಗಿ ಪತ್ತೆ

ನ್ಯೂಯಾರ್ಕ್ – ಅಮೇರಿಕದ ಖ್ಯಾತ ಕಿರುತೆರೆಯ ನಟಿ ಲಿಂಡ್ಸೇ ಪರ್ಲ್‌ಮನ್ (೪೩) ಅವರ ಮೃತದೇಹ ಹಾಲಿವುಡ್ ಸಮುಚ್ಛಯಗಳ ಸಮೀಪ ಪತ್ತೆಯಾಗಿದೆ. ನಟಿಯ ಸಾವಿಗೆ ಅವರ ಸಹಸ್ರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಅಮೇರಿಕದ ಟಿವಿ ವಾಹಿನಿಗಳಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ಜನರಲ್ ಹಾಸ್ಪಿಟಲ್, ಅಮೇರಿಕನ್ ಹೌಸ್ ವೈಫ್ ಮೊದಲಾದ ಟಿವಿ ಶೋಗಳಲ್ಲಿ ಲಿಂಡ್ಸೇ ನಟಿಸಿದ್ದರು. ಅಲ್ಲದೇ ಚಿಕಾಗೋದ ರಂಗಭೂಮಿಯಲ್ಲೂ ಅವರು ನಟಿಯಾಗಿ ಅಪಾರ ಅನುಭವ ಪಡೆದುಕೊಂಡಿದ್ದರು.

Home add -Advt

ಎರಡು ದಿನಗಳ ಹಿಂದೆ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು ಲಾಸ್ ಏಂಜಲಿಸ್ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ವೇಳೆ ಸ್ಥಳೀಯರು ಹಾಲಿವುಡ್ ವಸತಿ ಸಮುಚ್ಛಯಗಳ ಬಳಿ ಮಹಿಳೆಯ ಮೃತದೇಹವನ್ನು ಕಂಡು ಪೊಲೀಸಿರಿಗೆ ಮಾಹಿತಿ ನೀಡಿದರು. ಪರಿಶೀಲಿಸಲಾಗಿ ಮೃತದೇಹ ನಟಿ ಲಿಂಡ್ಸೇ ಅವರದ್ದೆಂದು ಖಚಿತವಾಗಿದೆ.

ಲಿಂಡ್ಸೇ ಅವರು ನಾಪತ್ತೆಯಾಗಿದ್ದಕ್ಕೆ ಮತ್ತು ಅವರ ಸಾವಿನ ಕಾರಣಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಲ್ ಎ ಕೌಂಟಿಯ ಪೊಲೀಸರು ತಿಳಿಸಿದ್ದಾರೆ.

ಸಯಾಮಿ ಅವಳಿಗಳಿಂದ ಪಂಜಾಬ್ ಚುನಾವಣೆಯಲ್ಲಿ ಮತದಾನ ! ಗೌಪ್ಯತೆ ಕಾಪಾಡಲು ಉಪಾಯ!!

Related Articles

Back to top button