
ಪ್ರಗತಿವಾಹಿನಿ ಸುದ್ದಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅವಳಿ-ಜವಳಿ ಮಕ್ಕಳು ರಾಜ್ಯಮಟ್ಟದಲ್ಲಿ 6ನೇ ರಾಂಕ್ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ವೈದ್ಯ ದಂಪತಿ ಡಾ. ದಿನೇಶ ಹೆಗಡೆ- ಡಾ. ಸುಮನ್ ಹೆಗಡೆ ಅವರ ಅವಳಿ-ಜವಳಿ ಮಕ್ಕಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 6ನೇ ರಾಂಕ್ ಪಡೆದಿದ್ದಾರೆ. ಈ ಮೂಲಕ ಪರೀಕ್ಷಾ ಫಲಿತಾಂಶದಲ್ಲೂ ಸಹೋದರತೆ ಮೆರೆದಿದ್ದಾರೆ.
600ಕ್ಕೆ 594 ಅಂಕ ಪಡೆದು 99 % ಸಾಧನೆ ಮಾಡಿದ (ಅವಳಿ-ಜವಳಿ) ವಿದ್ಯಾರ್ಥಿಗಳಾದ ದಕ್ಷ ಹಾಗೂ ರಕ್ಷಾ ಇಬ್ಬರೂ 600ಕ್ಕೆ 594 (99 %) ಒಂದೇ ಸಂಖ್ಯೆಯ ಅಂಕ ಪಡೆದಿರುವುದು ವಿಶೇಷವಾಗಿದೆ. ಈ ಇಬ್ಬರೂ ವಿದ್ಯಾರ್ಥಿಗಳು ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ದಕ್ಷನಿಗೆ 4 ವಿಷಯದಲ್ಲಿ 100%, ರಕ್ಷಾನಿಗೆ 2 ವಿಷಯದಲ್ಲಿ 100 % ಅಂಕ ಪಡೆದಿದ್ದಾರೆ.