
ಪ್ರಗತಿವಾಹಿನಿ ಸುದ್ದಿ: ಅಕ್ರಮವಾಗಿ ಗೋಮಾಂಸ ಗೋವಾಕ್ಕೆ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಅನಗೋಡದಲ್ಲಿ ನಡೆದಿದೆ.
ಕರ್ನಾಟಕದಿಂದ ಗೋವಾಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿಯ ಚಾಲಕ ಸಿದ್ದಪ್ಪಾ ಬಾಳಪ್ಪಾ ಬದ್ದೂರ ಮತ್ತು ಕ್ಲೀನರ್ ರಾಜು ಬಾಳು ನಾಯಕ ಬಂಧಿತ ಆರೋಪಿಗಳು.
ಬಂಧಿತರಿಂದ 6, 75, 500ರೂ. ಮೌಲ್ಯದ 1,930 ಕೆ.ಜಿ. ಗೋಮಾಂಸ ವಶಕ್ಕೆ ಪಡೆಯಲಾಗಿದೆ. ರಾಮನಗರ ಠಾಣೆಯ ಪಿಎಸ್‌ಐ ಮಹಾಂತೇಶ ನಾಯಕ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಇದಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಬೆಳಗಾವಿಯ ಅಮೋಲ್ ಮೋಹನದಾಸ ಎಂಬಾತನಿಗೆ ಪೊಲೀಸರು ಬಲೆ ಬೀಸಿದ್ದಾರೆ. ಅನಮೋಡ ಘಟ್ಟದಲ್ಲಿ ರಸ್ತೆ ಕುಸಿತದಿಂದಾಗಿ ರಸ್ತೆಯಲ್ಲಿ ಸದ್ಯ ಸಂಚಾರ ಸ್ಥಗಿತ
ಈ ಹಿನ್ನೆಲೆ ಪಿಎಸ್‌ಐ ಮಹಾಂತೇಶ ನೇತೃತ್ವದಲ್ಲಿ ರಾಮನಗರದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಗೋವಾ ಕಡೆಗೆ ಹೋಗುವ ವಾಹನಗಳನ್ನು ನಿಲ್ಲಿಸಿ, ಬದಲಿ ಮಾರ್ಗಸೂಚಿ ತೋರಿಸುತ್ತಿದ್ದರು ಈ ವೇಳೆ ಟಾಟಾ ಯೋಧಾ ವಾಹನ (KA 25 AB 6640) ಗೋವಾ ಕಡೆಗೆ ತೆರಳುತ್ತಿತ್ತು. ವಾಹನ ನಿಲ್ಲಿಸಲು ಹೇಳಿದಾಗ, ಚಾಲಕ ವಾಹನ ನಿಲ್ಲಿಸದೇ ಗೋವಾ ಕಡೆಗೆ ಪರಾರಿಯಾಗಲು ಯತ್ನಿಸುತ್ತಿದ್ದ ಅನುಮಾನಗೊಂಡ ಪೊಲೀಸರು ವಾಹನ ತಡೆಹಿಡಿದು ಚಾಲಕ ಮತ್ತು ಕ್ಲೀನರ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ 1,930 ಕೆ.ಜಿ. ಗೋಮಾಂಸ ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಿ, ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಾಗಿದೆ.