Latest

ಎರಡು ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋವಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕಾಣಕೋಣದ ತಾರಿ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Home add -Advt

ಹರೀಶ್ ಉಲ್ಲಾಸ್ ನಾಗೇಕರ್ (35), ಉಲ್ಲಾಸ ರಾಮ ನಾಗೇಕರ್ (60) ಹಾಗೂ ವೀಣಾ ಉಲ್ಲಾಸ್ ನಾಗೇಕರ್ (60) ಮೃತರು. ಗಾಯಾಳುಗಳನ್ನು ಕಾಣಕೋಣ ಬಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ನಿವಾಸಿಗಳು ಎಂದು ತಿಳಿದುಬಂದಿದೆ.

ಅಮಿತ್ ಶಾ ಭೇಟಿ ವೇಳೆ ಭದ್ರತೆ ಲೋಪ; ವ್ಯಕ್ತಿ ಬಂಧನ

https://pragati.taskdun.com/latest/amit-shahmumbaivisitsecurity-lapesone-aressted/

Related Articles

Back to top button