ಪ್ರಗತಿವಾಹಿನಿ ಸುದ್ದಿ: ಜಮೀನಿನ ಬಳಿ ಮಕ್ಕಳು ಆಟವಾಡುತ್ತಿದ್ದ ವೇಳೆ ಬೃಹತ್ ಬಂಡೆ ಉರುಳಿ ಬಿದ್ದು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಿನ ಲಿಂಗಸಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ನಡೆದಿದೆ.
9 ವರ್ಷದ ಮಂಜುನಾಥ್, 8 ವರ್ಷದ ವೈಶಾಲಿ ಮೃತ ಮಕ್ಕಳು. 7 ವರ್ಷದ ಇನ್ನೋರ್ವ ಬಾಲಕನ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲೆಗೆ ರಜೆ ಇದ್ದ ಕಾರಣ ಮೂವರು ಮಕ್ಕಳು ಹೊಲದ ಬದುವಿಗೆ ಹಾಕಿದ್ದ ಬಂಡೆ ಬಳಿ ಆಟವಾಡುತ್ತಿದ್ದರು. ಈ ವೇಳೆ ಬೃಹತ್ ಬಂಡೆ ಮಕ್ಕಳ ಮೇಲೆಯೇ ಉರುಳಿದೆ. ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಬಾಲಕನ ಕಾಲು ಮುರಿದಿದೆ. ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ