Kannada NewsLatest

ಬಿ.ಎಸ್.ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪುನಶ್ಚೇತನ ಕಾರ್ಯಕ್ರಮ

ಬಿ.ಎಸ್.ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪುನಶ್ಚೇತನ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಬಿ.ಎಸ್.ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದಿನಾಂಕ 17 ಮತ್ತು 18ರ ಜುಲೈ 2019 ರಂದು ಎರಡು ದಿನಗಳ ಪುನಶ್ಚೇತನ ಕಾರ್ಯಕ್ರಮವನ್ನು ಸರ್. ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅವರು ಕೆ.ಎಲ್.ಇ. ಸಂಸ್ಥೆ ಹಾಗೂ ಮಹಾವಿದ್ಯಾಲಯದ ಹುಟ್ಟು, ಬೆಳವಣಿಗೆ ಹಾಗೂ ಮಹತ್ವವನ್ನು ಉದ್ದೇಶಿಸಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಅವುಗಳ ಸದ್ಬಳಕೆಯ ಕುರಿತು ವಿವರಿಸಿದರು. ಪರೀಕ್ಷಾ ವಿಭಾಗದ ನಿಯಂತ್ರಕರಾದ ಪ್ರೊ. ಎ.ಎಸ್. ಪೂಜಾರ ಅವರು ಸ್ವಾಯತ್ತ ಪರೀಕ್ಷಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.

ಎನ್.ಸಿ.ಸಿ. ಅಧಿಕಾರಿಗಳಾದ ಪ್ರೊ. ಎಸ್.ಡಿ. ಗೋರಿನಾಯಕ ಅವರು ಎನ್.ಸಿ.ಸಿ. ವಿಭಾಗಗಳ ಕುರಿತು ಅವುಗಳಿಂದಾಗುವ ಪ್ರಯೋಜನಗಳ ಕುರಿತು ವಿವರಿಸಿದರು. ಪ್ಲೇಸ್‌ಮೆಂಟ್ ಅಧಿಕಾರಿಗಳಾದ ಪ್ರೊ. ಎನ್.ಬಿ. ಗೋಕಾವಿ ಅವರು ಪ್ರಸ್ತುತ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.

ಪ್ರೊ. ಎಸ್.ಎಸ್. ಅಬ್ಬಾಯಿ ಅವರು ಎನ್.ಎಸ್.ಎಸ್. ನ ಪ್ರಾಮುಖ್ಯತೆಯನ್ನು ವಿವರಿಸಿದರು. ಡಾ.(ಶ್ರೀಮತಿ.) ಜೆ.ಎಸ್. ಕವಳೇಕರ ಅವರು ಮಾತನಾಡಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗುವ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ, ಧೈರ್ಯವಂತಿಕೆ ಹಾಗೂ ಪ್ರತಿಕ್ರಿಯೆ ಕುರಿತು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಸಿಬ್ಬಂದಿ ವರ್ಗದವರ ಪರಿಚಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಕುಮಾರಿ. ವಿಜಯಲಕ್ಷ್ಮಿ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ.ಬಿ.ಜಿ. ಬೇವಿನಕಟ್ಟಿ ಅವರು ಸ್ವಾಗತಿಸಿದರು. ಪ್ರೊ. ಎಸ್.ಎಲ್. ಗಲಗಲಿ ಅವರು ವಂದಿಸಿದರು. ಪ್ರೊ.(ಮಿಸ್) ದಿವ್ಯಾ ಪರುಲೆಕರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ವರ್ಗದವರು, ಬಿ.ಎಸ್.ಸಿ. ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥತರಿದ್ದರು. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button