ಪ್ರಸೂತಿ ಮತ್ತು ಸೀರೋಗ ತಜ್ಞರ ಸಮಾವೇಶದಲ್ಲಿ ಡಾ.ಹೇಮಾ ದಿವಾಕರ್ ಅಭಿಪ್ರಾಯ
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಪ್ರಸೂತಿ ಮತ್ತು ಸೀರೋಗ ತಜ್ಞರು ಗರ್ಭಿಣಿಗೆ ಹೆರಿಗೆ ಮಾಡಿಸುವ ಮೂಲಕ ಕೇವಲ ಎರಡು ಜೀವಗಳನ್ನು ಉಳಿಸುವುದಿಲ್ಲ, ಬದಲಿಗೆ, ಎರಡು ಪೀಳಿಗೆಗಳಿಗೆ ಜನ್ಮ-ಮರುಜನ್ಮ ನೀಡುತ್ತಾರೆ ಎಂದು ಕೆಸಿಒಜಿ ಡೀನ್ ಮತ್ತು ಬೆಂಗಳೂರಿನ ದಿವಾಕರ್ ಸ್ಪೆಷಾಲಿಟಿ
ಸೆಂಟರ್‌ನ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಹೇಮಾ ದಿವಾಕರ್ ಅಭಿಪ್ರಾಯಪಟ್ಟರು.
ನಗರದ ಬಾಪೂಜಿ ಎಂಜಿನಿಯರಿಂಗ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆರಂಭವಾದ
ಪ್ರಸೂತಿ ಮತ್ತು ಸೀರೋಗ ತಜ್ಞರ ಸಮಾವೇಶದಲ್ಲಿ ಗರ್ಭಾವಸ್ತೆ ವೇಳೆ ನಡೆಸುವ ಪರೀಕ್ಷೆ
ಮತ್ತು ಸಮಸ್ಯೆ ಪತ್ತೆಹಚ್ಚುವಿಕೆಗೆ ಸಬಂಧಿಸಿದಂತೆ ಆಗಿರುವ ಬದಲಾವಣೆಗಳ ಕುರಿತು
ಉಪನ್ಯಾಸ ನೀಡಿದ ಅವರು, ಗರ್ಭಿಣಿಯರ ಬಗ್ಗೆ ಕಾಳಜಿ ವಹಿಸಿ, ರೋಗ್ಯವಂತ ಮಗುವಿನ
ಜನನಕ್ಕೆ ಕಾರಣರಾಗುವ ಪ್ರಸೂತಿ ತಜ್ಞರು, ಗರ್ಭಿಣಿಯರ ಪರೀಕ್ಷೆಗಳ ಕುರಿತು ಎಚ್ಚರ
ವಹಿಸಬೇಕು ಎಂದರು.
ಇತ್ತೀಚೆಗೆ ಹೆರಿಗೆ ನಂತರ ಟೈಪ್ 2 ಡಯಾಬಿಡೀಸ್‌ನಿಂದ ಬಳಲುವ ಮಹಿಳೆಯರ ಸಂಖ್ಯೆ
ಹೆಚ್ಚಾಗಿದೆ. ಈ ಕಾಯಿಲೆ ಬರುವ ಸಾಧ್ಯತೆಯನ್ನು ಮಹಿಳೆ ಗರ್ಭವತಿಯಾಗಿರುವಾಗಲೇ
ಪತ್ತೆಹಚ್ಚಿಘಿ, ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವೈದ್ಯರು
ಸದಾ ಜಾಗರೂಕರಾಗಿರಬೇಕು. ಮಹಿಳೆಯರು ತಮ್ಮ ಬಳಿ ಬಂದಾಗ, ತುಂಬಾ ಎಚ್ಚರಿಕೆಯಿಂದ
ಪರೀಕ್ಷಿಸಬೇಕು. ಇಂತಹ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸಿದರೆ ಮಗು ನಿಸಿದ ಒಂದು
ಅಥವಾ ಎರಡನೇ ವರ್ಷಕ್ಕೆ ಮಹಿಳೆಯು ಟೈಪ್ 2 ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ
ಹೆಚ್ಚಾಗಿರುತ್ತದೆ ಎಂದರು ಸಲಹೆ ನೀಡಿದರು.
ತಂತ್ರಜ್ಞಾನ ಯುಗದಲ್ಲಿ ಪರೀಕ್ಷೆ ಮಾಡುವ ಮೂಲಕ ಎಂಥದ್ದೇ ಸಮಸ್ಯೆಯನ್ನು ಪತ್ತೆಹಚ್ಚಲು
ಅವಕಾಶವಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗರ್ಭಿಣಿಯರ ಪರೀಕ್ಷೆ
ನಡೆಸಬೇಕು. ಮೊದಲ ಬಾರಿ ಪಡೆದ ವರದಿಯಲ್ಲಿ ಗೊಂದಲಗಳಿದ್ದರೆ ಎರಡನೇ ಬಾರಿ ಪರೀಕ್ಷೆ
ನಡೆಸಲು ಹಿಂದೇಟು ಹಾಕಬಾರದು. ಇಲ್ಲಿ ಎಷ್ಟು ಬಾರಿ ಪರೀಕ್ಷೆ ನಡೆಸಿದ್ದೇವೆ
ಎನ್ನುವುದಕ್ಕಿಂತ ರೋಗಿಯ ಸುರಕ್ಷತೆ ಮುಖ್ಯ ಎಂದರು.
ಇದಕ್ಕೂ ಮುನ್ನ ಸಮಾವೇಶ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಿ.ಬಿ.ರಿಷ್ಯಂತ್ ಮಾತನಾಡಿದರು.
ಕಸೋಗ ಮುಖ್ಯಸ್ಥ ಡಾ.ಎಂ.ಜಿ.ಹಿರೇಮಠ್, ಅಧ್ಯಕ್ಷ ಡಾ.ಬಸವರಾಜ ಸಜ್ಜನ್, ಗೌರವ
ಕಾರ್ಯದರ್ಶಿ ಡಾ. ಭಾರತಿ ರಾಜಶೇಖರ್, ಡಾ.ಮಂಜುಳಾ ಪಾಟೀಲ್, ಡಾ.ಅರುಣ್ ಇತರರಿದ್ದರು.
ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಅಸೋಸಿಯೇಷನ್ (KSOGA) 31ನೇ ವಾರ್ಷಿಕ ಸಮ್ಮೇಳನ ಶುಕ್ರವಾರ ದಾವಣಗೆರೆಯಲ್ಲಿ ಆರಂಭವಾಯಿತು. ಮೂರು ದಿನಗಳ ಸಮ್ಮೇಳನದಲ್ಲಿ ಕರ್ನಾಟಕದಾದ್ಯಂತ ವೈದ್ಯರು ದೈಹಿಕವಾಗಿ ಮತ್ತು ವರ್ಚ್ಯುವಲ್ ಆಗಿ ಭಾಗವಹಿಸುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಉನ್ನತೀಕರಿಸಿಕೊಳ್ಳುವ ಹಲವಾರು ವೈಜ್ಞಾನಿಕ ಗೋಷ್ಠಿಗಳು ಇಲ್ಲಿ ನಡೆಯಲಿವೆ.
KASOGAದ ಶೈಕ್ಷಣಿಕ ವಿಭಾಗದ ಅಡಿಯಲ್ಲಿ ಬರುವ ಕರ್ನಾಟಕ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಕಾಲೇಜು (KCOG) ಇದೇ ಸಂದರ್ಭದಲ್ಲಿ ತನ್ನ ಮೊದಲ ಘಟಿಕೋತ್ಸವವನ್ನು ಸಹ ಆಯೋಜಿಸಿದೆ.
ರಾಷ್ಟ್ರೀಯ ಸಂಸ್ಥೆ ICOG ಮತ್ತು ಲಂಡನ್‌ನಲ್ಲಿರುವ ಅಂತರರಾಷ್ಟ್ರೀಯ RCOG ಮಾದರಿಯಲ್ಲೇ KCOG ವನ್ನು ಸಾಲುಗಳಲ್ಲಿ ಸ್ಥಾಪಿಸಲಾಗಿದೆ.
ಜ್ಞಾನ ಪ್ರಸರಣ, ಕೌಶಲ್ಯ ವರ್ಗಾವಣೆ, ಸಂಶೋಧನೆಯ ಮೇಲೆ ಕೇಂದ್ರೀಕರಿಸಲು ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಸೋಗಾ ಅಕಾಡೆಮಿಕ್ ವಿಭಾಗದಿಂದ ಇಂತಹ ಕಾಲೇಜನ್ನು ಸ್ಥಾಪಿಸಲಾಗಿದೆ.
ವಿಧಾನಮಂಡಲದಲ್ಲಿ ಇಂದು; ಸಂಪೂರ್ಣ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ