
ಪ್ರಗತಿವಾಹಿನಿ ಸುದ್ದಿ; ರಾಯಚೂರು: ಅತ್ತೆ ಮನೆಗೆ ಬಂದು ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವತಿಯರು ನೀರುಪಾಲಾದ ಘಟನೆ ರಾಯಚೂರು ಜಿಲ್ಲೆ ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ.
16 ವರ್ಷದ ತನಾಜ್, 20 ವರ್ಷದ ಮುಸ್ಕಾನ್ ಮೃತ ಯುವತಿಯರು. ರಾಯಚೂರಿನ ಲಾಲ್ ಪಹಡಿ ಹಾಗೂ ಮಾಣಿಕ ನಗರ ನಿವಾಸಿಗಳಾದ ಯುವತಿಯರು ಅತ್ತೆ ಮನೆಗೆ ಬಂದಿದ್ದರು. ಈ ವೇಳೆ ಕೆರೆಯಲ್ಲು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿಸಿ ವಂಚಿಸಿದ ಯುವತಿ; ವಾಯ್ಸ್ ಮೆಸೇಜ್ ಕಳುಹಿಸಿ ಯುವಕ ಆತ್ಮಹತ್ಯೆ
ಪ್ರಾಮಾಣಿಕರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಿ ಭ್ರಷ್ಟರಿಗೆ ಶಿಕ್ಷೆ ವಿಧಿಸಿ – ಗೃಹ ಸಚಿವರಿಗೆ ಚನ್ನರಾಜ ಹಟ್ಟಿಹೊಳಿ ಪತ್ರ