
ಪ್ರಗತಿವಾಹಿನಿ ಸುದ್ದಿ : ಗ್ಯಾರಂಟಿ ಯೋಜನೆ ಗೃಹಲಕ್ಷ್ಮ ಯ ಹಣ ಶೀಘ್ರದಲ್ಲಿಯೇ ಮಹಿಳೆಯರ ಅಕೌಂಟ್ ಗೆ ಜಮಾ ಆಗಲಿದೆ.
ಈ ಬಗ್ಗೆ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಪ್ರಸಕ್ತ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳ ಹಣ ಬಿಡುಗಡೆ ಬಾಕಿ ಇದ್ದು ಶೀಘ್ರದಲ್ಲಿಯೇ ಬಾಕಿ ಮೊತ್ತವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದಿದ್ದಾರೆ.
ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಎಂದು ಕಲಾಪದಲ್ಲಿ ಚರ್ಚೆ ಆಯಿತು. ವಿಪಕ್ಷ ನಾಯಕರ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರ ಪರವಾಗಿ ಸಂತೋಷ ಲಾಡ್ ಉತ್ತರ ನೀಡಿ, ಸಂಪನ್ಮೂಲ ಸಂಗ್ರಹವನ್ನು ಆಧರಿಸಿ ಸರ್ಕಾರ ಹಣ ಬಿಡುಗಡೆ ಕೈಗೊಳ್ಳಬೇಕಾಗುತ್ತದೆ. ಸಂಪನ್ಮೂಲ ಕ್ರೋಡೀಕರಣ ಸಮಸ್ಯೆಗಳ ಕಾರಣದಿಂದ ಎರಡು ತಿಂಗಳ ಹಣ ಬಿಡುಗಡೆಯಾಗಿಲ್ಲ. ಗೃಹಲಕ್ಷ್ಮಿಯೋಜನೆ ಫಲಾನುಭವಿಗಳಿಗೆ ಪ್ರಸಕ್ತ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳ ಹಣ ಬಿಡುಗಡೆ ಬಾಕಿ ಇದ್ದು ಶೀಘ್ರದಲ್ಲಿಯೇ ಬಾಕಿ ಮೊತ್ತವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.