Kannada NewsKarnataka NewsLatest

ರೆಮ್ ಡಿಸಿವರ್ ಇಂಜಕ್ಷನ್ ಇಲ್ಲದೆ ಕಿತ್ತೂರಲ್ಲಿ ಇಬ್ಬರ ಸಾವು – ಕೊಟಬಾಗಿ ಆರೋಪ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು –  ರೆಮ್ ಡಿಸಿ ವಿಆರ್  ಇಂಜೆಕ್ಷನ್ ಇಲ್ಲದೆ ನಿನ್ನೆ ಕಿತ್ತೂರಿನಲ್ಲಿ ಇಬ್ಬರ ಸಾವು ಸಂಭವಿಸಿದೆ ಎಂದು ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಹನುಮಂತ ಕೊಟಬಾಗಿ ಆರೋಪಿಸಿದ್ದಾರೆ.

ನಾನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮತ್ತು ಇಡಿಸಿಯವರಿಗೆ ಕೈಮುಗಿದುಕೊಂಡು ವಿನಂತಿಸಿಕೊಂಡಿದ್ದೆ,  ಕೋವಿಡ್ ಆಸ್ಪತ್ರೆ ಪ್ರಾರಂಭ ಮಾಡುವ ಮುಂಚೆ ಆಕ್ಸಿಜನ್ ಕಿಟ್, ರೆಮಿಡಿಸಿವಿಅರ್  ಇಂಜೆಕ್ಷನ್ ಹಾಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಪ್ರಾರಂಭ ಮಾಡಿ ಎಂದು ವಿನಂತಿಸಿದ್ದೆ. ಆದರೆ ತರಾತುರಿಯಲ್ಲಿ ಕಿತ್ತೂರಿನ ಗಡಿಗಿ ದವಾಖಾನೆಯಲಿೢ ಇಪ್ಪತ್ತು ಹಾಸಿಗೆಗಳ ಕೋವಿಡ್ ಸೆಂಟರ್ ತೆಗೆದು ಇಂಜೆಕ್ಷನ್ ಇಲ್ಲದೆ ನಿನ್ನೆ ಇಬ್ಬರು ಮರಣ ಹೊಂದಿದರು ಎಂದು ಅವರು ಆರೋಪಿಸಿದ್ದಾರೆ.

ಕಿತ್ತೂರಿನ ಶಿಕ್ಷಕರಾದ  ಶಶಿಧರ್ ಬುೂಗುರ  ನಿನ್ನ  ಸಾವನ್ನಪ್ಪಿದರು.  ಹುಣಿಶಿಕಟ್ಟಿ ಗ್ರಾಮದ ಒಬ್ಬ ಹೆಣ್ಣುಮಗಳು ಸಹಿತ ನಿನ್ನೆ ಇಂಜೆಕ್ಷನ್ ಇಲ್ಲದೆ ಸಾವನ್ನಪ್ಪಿದರು. ಈ ಸಾವಿಗೆ ಯಾರು ಹೊಣೆ? ತಕ್ಷಣ ಜಿಲ್ಲಾಧಿಕಾರಿಗಳು ಇಂದು ಮತ್ತೆ ರೆಮಿಡಿಸಿವಿಆರ್  ಇಂಜೆಕ್ಷನ್ ಗಳನ್ನು ಇಡೀ ಜಿಲ್ಲೆಯ ಎಲ್ಲ ಹಾಸ್ಟೆಲ್ ಗಳಿಗೆ ಪೂರೈಸಿದ್ದಾರೆ.  ಆದರೆ ಕಿತ್ತೂರಿನ ಗಡಿಗಿ ಕೋವಿಡ್ ಹಾಸ್ಪಿಟಲ್ ಗೆ  ಒದಗಿಸಿಲ್ಲ . ಯಾಕೆ ಈ ತಾರತಮ್ಯ ನನಗೆ ಅರ್ಥವಾಗುತ್ತಿಲ್ಲ. ವಾರದ ಮುಂಚೆಯೇ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದು ಸಂಪೂರ್ಣವಾಗಿ ತಿಳಿಸಿದ್ದೇನೆ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರಾದ  ಗೋವಿಂದ ಕಾರಜೋಳರ ಗಮನಕ್ಕೂ ತಂದಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಈ ಸಾವಿಗೆ ಹೊಣೆ ಯಾರು? ನಾನು ಯಾರ ಬಗ್ಗೆಯೂ ಟೀಕೆ ಟಿಪ್ಪಣೆ ಮಾಡೋದಿಲ್ಲ. ಯಾರು ಕಿತ್ತೂರಿಗೆ   ಜವಾಬ್ದಾರರೋ ಅವರೇ ಗಮನಹರಿಸಬೇಕು. ತಕ್ಷಣ ಜಿಲ್ಲಾಧಿಕಾರಿಗಳಿಗೆ ಮಾತಾಡಿ ಇಂಜೆಕ್ಷನ್ನ  ತರುವಲ್ಲಿ  ಗಮನ ಹರಿಸಬೇಕು. ಅವರೇ ಗಮನಹರಿಸಲಿಲ್ಲ ಅಂದ್ರೆ ಯಾರು ಗಮನ ಹರಿಸಬೇಕು? ತಕ್ಷಣ ಸಂಬಂಧಪಟ್ಟವರು  ಗಡಿಗಿ ಕೋವಿಡ್ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಎಲ್ಲ ವ್ಯವಸ್ಥೆಯನ್ನು ಪೂರೈಸಲೇಬೇಕು ಎಂದು ಹನುಮಂತ ಕೊಟಬಾಗಿ ಆಗ್ರಹಿಸಿದ್ದಾರೆ.

Home add -Advt

Related Articles

Back to top button