ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದ ಕೆಲ ಹೋಟೆಲ್ ಹಾಗೂ ಧಾಬಾಗಳಿಗೆ ಉಡದ ಮಾಂಸ ಪೂರೈಕೆ ಮಾಡುತ್ತಿದ್ದ ಇಬ್ಬರನ್ನು ಜಾಲಹಳ್ಳಿ ಅರಣ್ಯಧಿಕಾರಿಗಳು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಗ್ರಾಮದ ಧಾಬಾ ಬಳಿ ಈ ಕಾರ್ಯಾಚರಣೆ ನಡೆಸಲಾಗಿದೆ. ಗೋವಿಂದ (55) ಹಾಗೂ ಮಹಮ್ಮದ್ ರಫಿಕ್ (67) ಬಂಧಿತ ಆರೋಪಿಗಳು. ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 4 ಜೀವಂತ ಉಡಗಳನ್ನು ಅರಣ್ಯಧಿಕಾರಿಗಳು ವಶಪಡಿಸಿಕೊಂಡು ರಕ್ಷಣೆ ಮಾಡಿದ್ದಾರೆ.
ಈ ಆರೋಪಿತರು ಬೇರೆಬೇರೆ ಹೋಟೆಲ್ ಹಾಗೂ ಧಾಬಾಗಳಿಂದ ಉಡದ ಮಾಂಸಕ್ಕಾಗಿ ಆರ್ಡರ್ ಪಡೆದು ಕೋಲಾರ ಜಿಲ್ಲೆಯ ದಟ್ಟಾರಣ್ಯಗಳಲ್ಲಿ ಬೇಟೆಯಾಡಿ ಉಡಗಳನ್ನು ತಂದು ಪೂರೈಸುತ್ತಿದ್ದರು. ಇದರಿಂದ ಲಕ್ಷಾಂತರ ರೂ. ಗಳಿಸುತ್ತಿದ್ದರು.
ಖಚಿತ ಮಾಹಿತಿ ಪಡೆದ ಸಂಚಾರಿ ಅರಣ್ಯ ಇಲಾಖೆ ಅರಣ್ಯಾಧಿಕಾರಿಗಳಾದ ಸಿದ್ದರಾಜು, ಚಿದಾನಂದ್ ಎಚ್.ಆರ್, ಅಮೃತ್ ಹಾಗೂ ಅಶ್ವಿನ್ ಅವರು ಉಡಗಳನ್ನು ಖರೀದಿಸುವ ನೆಪದಲ್ಲಿ ಹೋಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ