Latest

*ಪರಿಶೀಲನೆ ನೆಪದಲ್ಲಿ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಹಣ ಸುಲಿಗೆ ಮಾಡಿದ್ದ ಇಬ್ಬರು ಪೊಲೀಸರು ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬ್ಯಾಗ್ ಪರಿಸೀಲನೆ ನಡೆಸುವ ನೆಪದಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬ್ಯಾಗ್​ ನಲ್ಲಿ ಗಾಂಜಾ ಇರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಬಂಡೇಪಾಳ್ಯ ಠಾಣೆಯ ಇಬ್ಬರು ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕರ್ತವ್ಯಲೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಬ್ಬರು ಪೇದೆಗಳನ್ನು ಸೇವೆಯಿಂದ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೈಭವ್ ಪಾಟೀಲ್ ಎಂಬುವವರು ರ್ಯಾಪಿಡ್ ಬೈಕ್ ನಲ್ಲಿ ತೆರಳುತ್ತಿದ್ದಾಗ ತಡೆದ ಇಬ್ಬರು ಪೊಲಿಸ್ ಸಿಬ್ಬಂದಿಗಳು, ಅನಗತ್ಯವಾಗಿ ಮಾದಕ ವಸ್ತು ಕಾಯ್ದೆ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಸ್ವತ: ವೈಭವ್ ಪಾಟೀಲ್ ಟ್ವಿಟರ್ ನಲ್ಲಿ ನೋವು ಹಂಚಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜ.13ರಂದು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ವೈಭವ್ ಪಾಟೀಲ್ ತಮ್ಮ ಹೇಳಿಕೆ ದಾಖಲಿಸಿದ್ದರು. ಬೈಕ್ ನಿಲ್ಲಿಸಿ ಬ್ಯಾಗ್ ಪರಿಶೀಲನೆ ನೆಪದಲ್ಲಿ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ನನ್ನ ಬ್ಯಾಗ್ ನಿಂದಲೇ ಅದನ್ನು ತೆಗೆಯುತ್ತಿದ್ದಂತೆ ನಾಟಕವಾಡಿ, ಬಳಿಕ ಗಾಂಜಾ ಸೇವಿಸುವುದಾಗಿ ಒಪ್ಪಿಕೊ ಎಂದು ಒತ್ತಾಯಿಸಿದ್ದಾರೆ. ಹಣ ನೀಡಬೇಕು ಇಲ್ಲವಾದಲ್ಲಿ ಮಾದಕವಸ್ತು ಕಾಯ್ದೆಯಡಿ ಬಂಧಿಸುವುದಾಗಿ ಬೆದರಿಸಿ ತನ್ನಬಳಿ ಇದ್ದ 2500 ರೂ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು.

ಪೊಲೀಸ್ ಠಾಣೆಗೆ ಹೋಗಿ ಇಬ್ಬರು ಪೊಲೀಸ್ ಕಾನ್ಸ್​ಟೆಬಲ್​’ಗಳನ್ನು ಗುರುತಿಸಿ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ನೀಡಿದ್ದೇನೆ. ಮರುದಿನವೂ ಪೊಲೀಸ್ ಠಾಣೆಗೆ ಭೇಟಿ ನೀಡಿ ನನ್ನ ಖಾಯಂ ವಿಳಾಸ ಮತ್ತಿತರ ವಿವರಗಳನ್ನು ಕೊಟ್ಟೆ ಎಂದು ವಿವರಿಸಿದ್ದರು. ನನ್ನ ದೂರು ನಿರಾಕರಿಸಿದ್ದ ಕಾನ್ಸ್​’ಟೆಬಲ್​’ಗಳು, ‘ನಾನು ತಪಾಸಣೆಗೆ ಒಳಪಡಲು ನಿರಾಕರಿಸಿದ್ದಾಗಿ ಹಾಗೂ ನನ್ನಿಂದ ಹಣ ಪಡೆಯಲಿಲ್ಲ’ ಎಂದು ಹೇಳಿದರು. ಇದನ್ನು ನಾನು ಒಪ್ಪಲಿಲ್ಲ. ಆಗಲೂ ನನ್ನನ್ನು ತಪಾಸಣೆಗೆ ಒಳಪಡಿಸಬಹುದು. ಒಂದು ವೇಳೆ ನನ್ನ ಬಳಿ ಮಾದಕವಸ್ತು ಇದ್ದಿದ್ದೇ ಆದರೆ ನನ್ನನ್ನು ಇವರು ಮುಂದೆ ಹೋಗಲು ಬಿಟ್ಟಿದ್ದಾದರೂ ಹೇಗೆ ಎಂದು ಪ್ರಶ್ನಿಸಿದೆ’ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ತನಿಖೆ ಬಳಿಕ ಇದೀಗ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಆರು ತಿಂಗಳ ಹಿಂದೆ ಹಿಮಾಚಲ ಪ್ರದೇಶದಿಂದ ಬೆಂಗಳೂರಿಗೆ ಆಗಮಿಸಿದ್ದರು. ಖಾಸಗಿ ಕಂಪನಿಯಲ್ಲಿ ಪಾಟೀಲ್ ಉದ್ಯೋಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

*BJPಯ ಮತ್ತೋರ್ವ ಶಾಸಕನ ವಿರುದ್ಧ ಲಂಚ ಪಡೆದ ಆರೋಪ; ಆಡಿಯೋ ಬಿಡುಗಡೆ*

https://pragati.taskdun.com/bjp-mla-tippareddycorreptionaudio-releasechitradurga/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button