Latest

15 ವರ್ಷಗಳ ದಾಂಪತ್ಯ ಜೀವನ ಅಂತ್ಯ; ಪತ್ನಿಗೆ ವಿಚ್ಛೇದನ ನೀಡಿದ ನಟ ಆಮಿರ್ ಖಾನ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದು, ವಿಚ್ಛೇದನ ಘೋಷಿಸಿದ್ದಾರೆ.

ಇಬ್ಬರೂ ಸಹಮತಿಯೊಂದಿಗೆ ವಿಚ್ಛೇದನಕ್ಕೆ ನಿರ್ಧರಿಸಿದ್ದು, ನಾವು ನಮ್ಮ ಬದುಕಿನ ಹೊಸ ಅಧ್ಯಾಯ ಆರಂಭಿಸಲಿದ್ದೇವೆ. ಇನ್ಮುಂದೆ ನಾವು ಪತಿ-ಪತ್ನಿಯಾಗಿ ಮುಂದುವರೆಯಲ್ಲ. ಆದರೆ ಸಹ ಪೋಷಕರಾಗಿ ಇಬ್ಬರು ಮಕ್ಕಳಿಗೆ ನೆರವಾಗುತ್ತೇವೆ ಎಂದು ತಿಳಿಸಿದ್ದಾರೆ.

Home add -Advt

ನಾವು ಚಲನಚಿತ್ರಗಳು, ಪಾನಿ ಫೌಂಡೇಶನ್ ಮತ್ತು ಇತರ ಯೋಜನೆಗಳ ಸಹಯೋಗಿಗಳಾಗಿ ಕೆಲಸ ಮುಂದುವರಿಸುತ್ತೇವೆ. ನಮ್ಮ ಸಂಬಂಧದಲ್ಲಿನ ಈ ನಿರ್ಧಾರದ ಬಗ್ಗೆ ಅರ್ಥೈಸಿಕೊಂಡು, ಬೆಂಬಲ ನೀಡಿದ ನಮ್ಮ ಕುಟುಂಬಗಳು ಮತ್ತು ಸ್ನೇಹಿತರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಎದೆ ಝಲ್ ಎನಿಸುವ ಭೀಕರ ಘಟನೆ…!

ಬಾಲಿವುಡ್ ನಟ ಡಿನೊ ಮೊರಿಯಾ ಸೇರಿ ಇಬ್ಬರ ಆಸ್ತಿ ಜಪ್ತಿ

Related Articles

Back to top button