ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಡ್ಯಾಂ ಬಳಿಯ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದ ಬಳಿ ನಡೆದಿದೆ.
ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿನ ಎಂ ಬಿ ಬಿಎಸ್ ವಿದ್ಯಾರ್ಥಿ 20 ವರ್ಷದ ಸಚ್ಚಿದಾನಂದ ಹಾಗೂ ಆತನ ರಕ್ಷಣೆಗೆ ತೆರಳಿದ್ದ ಸ್ನೇಹಿತ ನರೇಶ್ ಬಾಬು ಮೃತರು.
ಸಚ್ಚಿದಾನಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಸ್ನೇಹಿತರ ಜೊತೆ ಬಂದಿದ್ದ. ಈ ವೇಳೆ ಜಲಾಸಯದ ಪಕ್ಕದಲ್ಲಿದ್ದ ಹೊಂಡದಲ್ಲಿ ಈಜಲು ಹೋಗಿದ್ದಾನೆ. ಈಜುತ್ತಿದ್ದಾಗಲೇ ಏಕಾಏಕಿ ಸಚ್ಚಿದಾನಂದ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಸ್ನೇಹಿತ ನರೇಶ್ ಹೊಂದಕ್ಕೆ ಹಾರಿ ಆತನನ್ನು ರಕ್ಷಿಸಲು ಹೋಗಿದ್ದಾನೆ. ಆದರೆ ಆತನೂ ನೀರಿನಲ್ಲಿ ಮುಳುಗಿದ್ದು, ಇಬ್ಬರು ಯುವಕರೂ ಸಾವನ್ನಪ್ಪಿದ್ದಾರೆ.
ನರೇಶ್ ಬಾಬು ಶವ ಪತ್ತೆಯಾಗಿದ್ದು, ವಿದ್ಯಾರ್ಥಿ ಸಚ್ಚಿದಾನಂದನ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದೆ.
ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಚಾಕು ಇರಿದು ಯುವಕನ ಹತ್ಯೆ
https://pragati.taskdun.com/latest/four-accused-arrestedstabbing-a-manbelagaviganesh-visarjane/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ