Cancer Hospital 2
Beereshwara 36
LaxmiTai 5

*ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಭಾರತೀಯರು; ಪಾಕ್ ಸೇನೆಯಿಂದ ಬಂಧನ*

Anvekar 3

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಟ್ಲೆಜ್ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಭಾರತೀಯರನ್ನು ಪಾಕಿಸ್ತಾನದ ಸೈನಿಕರು ಬಂಧಿಸಿದ್ದಾರೆ.

ಲೂಧಿಯಾನದ ಸಿಧ್ವಾನ್ ಬೆಟ್ ಗ್ರಾಮದ ರತನ್ ಲಾಲ್ ಸಿಂಗ್ ಮತ್ತು ಹಮೀಂದರ್ ಸಿಂಗ್ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದವರು. ಭಾರಿ ಮಳೆಯಿಂದಾಗಿ ಸಟ್ಲೆಜ್ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ನೀರಿನಲ್ಲಿ ಇಬ್ಬರು ಕೊಚ್ಚಿ ಹೋಗಿದ್ದರು. ಇಬ್ಬರನ್ನೂ ಪಾಕ್ ಸೇನೆ ಬಂಧಿಸಿದೆ.

ಈ ಬಗ್ಗೆ ಗಡಿ ಭದ್ರತಾ ಪಡೆ (ಬಿಎಸ್ ಎಫ್)ಗೆ ಮಾಹಿತಿ ರವಾನಿಸಲಾಗಿದ್ದು, ಇಬ್ಬರನ್ನೂ ಬಿಎಸ್ ಎಫ್ ಗೆ ಪಾಕಿಸ್ತಾನ ಹಸ್ತಾಂತರ ಮಾಡುವುದನ್ನು ಕಾಯುತ್ತಿರುವುದಾಗಿ ಹಾಗೂ ತವರು ನೆಲಕ್ಕೆ ಮರಳಿದ ಬಳಿಕವೇ ಅವರು ಪಾಕಿಸ್ತಾನಕ್ಕೆ ದಾಟಲು ನಿಖರ ಕಾರಣ ಬಹಿರಂಗಪಡಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Emergency Service

ಮೂರು ದಿನಗಳ ಹಿಂದೆ ಕಿವುಡನೊಬ್ಬ ಸಟ್ಲೆಜ್ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿ ಪಾಕಿಸ್ತಾನಕ್ಕೆ ತಲುಪಿದ್ದ. ಈ ವ್ಯಕ್ತಿಯನ್ನು ಗುಪ್ತಚರ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಅದರ ಬೆನ್ನಲ್ಲೇ ಈಗ ಮತ್ತಿಬ್ಬರು ಭಾರತೀಯರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಪಾಕಿಸ್ತಾನ ಅವರನ್ನು ವಶಕ್ಕೆ ಪಡೆದಿದೆ.


Bottom Add3
Bottom Ad 2