Kannada NewsKarnataka NewsLatest

*4 ವರ್ಷದ ಮಗುವಿನ ಮೇಲೆ ರಾಟ್ ವೀಲರ್ ದಾಳಿ: ಬಾಲಕನ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ದಾಳಿ ಹೆಚ್ಚುತ್ತಿದ್ದು, ಮಕ್ಕಳು, ದೊಡ್ದವರು ಕೂಡ ನಾಯಿ ದಾಳಿಯಿಂದ ಸಂಕಷ್ಟಕ್ಕೀಡಾಗುವಂತಾಗಿದೆ. ಈ ನಡುವೆ ಸಾಕು ನಾಯಿ ರಾಟ್ ವೀಲರ್ ಮಗುವೊಂದರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.

ಬೆಂಗಳೂರಿನ ಬನಶಂಕರಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ 6ನೇ ಹಂತದಲ್ಲಿ ರಾಟ್ ವೀಲರ್ ನಾಯಿಯೊಂದು 4 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯಿಂದ ಬಾಲಕನ ಕಾಲಿನ ಮಾಂಸ ಖಂಡವೇ ಕಿತ್ತು ಬಂದಿದೆ. ಬಾಲಕ ಸ್ಥಿತಿ ಗಂಭೀರವಾಗಿದೆ.

ಬನಶಂಕರಿಯ ಮುನಿಯಪ್ಪ ಎಂಬುವವರು ರಾಟ್ ವೀಲರ್ ನಾಯಿಯನ್ನು ಸಾಕಿದ್ದರು. ನಾಯಿ ವಾಕಿಂಗ್ ಮಾದಿಸಲು ಅದರ ಬೆಲ್ಟ್ ಬಿಚ್ಚಿದ್ದರು. ಈ ವೇಳೆ ಬಾಲಕನ ಮೇಲೆ ನಾಯಿ ದಾಳಿ ನಡೆಸಿದೆ.

ಬಾಲಕನ ಸ್ಥಿತಿ ಗಂಭೀರವಾಗಿದ್ದು, ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಟ್ ವೀಲರ್ ನಾಯಿ ಮಾಲೀಕನ ವಿರುದ್ಧ ಬಾಲಕನ ಪೋಷಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button