Vikalachetanara Day
Cancer Hospital 2
Bottom Add. 3

*ಮಾಜಿ ರಾಜ್ಯಪಾಲ ಉಡುಪಿ ಮೂಲದ ಪಿ.ಬಿ.ಆಚಾರ್ಯ ಇನ್ನಿಲ್ಲ*

ಉಡುಪಿ: ಮಾಜಿ ರಾಜ್ಯಪಾಲ ಉಡುಪಿಯ ಪದ್ಮನಾಭ ಬಾಲಕೃಷ್ಣ ಆಚಾರ್ಯ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ಮುಂಬೈನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ಪಿ.ಬಿ.ಆಚಾರ್ಯ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲಪ್ರದೇಶದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಪಿ.ಬಿ.ಆಚಾರ್ಯ ಅವರು ಉಡುಪಿ ಮೂಲದವರಾಗಿದ್ದು, ತೆಂಕಪೇಟೆಯ ಆಚಾರ್ಯ ಮಠದಲ್ಲಿ 1931ರಲ್ಲಿ ಅ.8ರಂದು ಬಾಲಕೃಷ್ಣ, ರಾಧಾ ಆಚಾರ್ಯ ದಂಪತಿ ಪುತ್ರನಾಗಿ ಜನಿಸಿದ್ದರು. ಪ್ರೌಇಢಶಾಲೆ ಬಳಿಕ ಮುಂಬೈಗೆ ತೆರಳಿ ವಿದ್ಯಾಬ್ಯಾಸ, ಉದ್ಯೋಗ ಮಾಡುತ್ತಿದ್ದರು. ಆರ್.ಎಸ್.ಎಸ್ ಕಾರ್ಯಕರ್ತರಾಗಿ ಬಳಿಕ ಈಶಾನ್ಯರಾಜ್ಯಗಳ ಅಭಿವೃದ್ಧಿಗೆ ಶ್ರಮ ವಹಿಸಿದ್ದರು. ರಾಜ್ಯಪಾಲರಾದ ಬಳಿಕ ಬಡ ಜನರಿಗೆ ರಾಜಭವನವನ್ನು ಮುಕ್ತವಾಗಿ ತೆರೆದಿಟ್ಟಿದ್ದರು. ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಶಿಕ್ಷಣ ಕೊಡುತ್ತಿದ್ದರು.

Bottom Add3
Bottom Ad 2

You cannot copy content of this page