Latest

*ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ ಮಹಿಳೆ*

ಕ್ಷಣಾರ್ಧದಲ್ಲಿ ರಕ್ಷಿಸಿದ ಮಹಿಳಾ ಸಿಬ್ಬಂದಿಗಳು

ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಮಹಿಳೆಯೊಬ್ಬರು ಕೆಳಗೆ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ. ರೈಲು ನಿಲ್ದಾಣಕ್ಕೆ ಬಂದು ನಿಲ್ಲುತ್ತಿದ್ದ ರೈಲಿನ ವೇಗ ಇನ್ನೂ ಕಡಿಮೆಯಾಗುವ ಮೊದಲೇ ನಿಲ್ದಾಣದಲ್ಲಿ ನಿಂತಿದ್ದ ಮಹಳೆ ಓಡಿಹೋಗಿ ರೈಲನ್ನು ಹತ್ತಲು ಯತ್ನಿಸಿದ್ದಾರೆ. ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ಇದನ್ನು ಗಮನಿಸಿದ ಆರ್ ಪಿಎಫ್ ಮಹಿಳಾ ಸಿಬ್ಬಂದಿಗಳು ಕ್ಷಣಾರ್ಧದಲ್ಲಿ ಮಹಿಳೆಯನ್ನು ಹಿಡಿದು ಎಳೆದಿದ್ದಾರೆ. ಸದ್ಯ ಮಹಿಳೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಪ್ರಾಣಾಪಾಯಿಂದ ಪಾರಾಗಿದ್ದು, ಕೈ-ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Home add -Advt

ಉಡುಪಿ ರೈಲು ನಿಲ್ದಾಣದಲ್ಲಿ ಮಂಘಳೂರು-ಮಡಗಾಂವ್ ರೈಲು ಹತ್ತುವ ವೇಳೆ ಈ ಘಟನೆ ನಡೆದಿದೆ. ರೈಲು ಬಂದು ನಿಲ್ದಣದಲ್ಲಿ ನಿಲ್ಲುವ ಮೊದಲೇ ಗಡಿಬಿಡಿಯಲ್ಲಿ ರೈಲು ಹತ್ತಲು ಮಹಿಳೆ ಹೋಗಿ ಅಪಾಯ ತಂದುಕೊಂಡಿದ್ದಾರೆ.


Related Articles

Back to top button