
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬರು ಮೀನು ಕದ್ದಿದ್ದಾಳೆ ಎಂದು ಆರೋಪಿ ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.
ಲಕ್ಷ್ಮೀ ಬಾಯಿ ಹಲ್ಲೆಗೊಳಗಾದ ಮಹಿಳೆ. ಆಕೆ ಮೀನು ಕದ್ದಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಹೊಡೆದಿದ್ದಾರೆ. ಅಲ್ಲದೇ ಕಪಾಳಕ್ಕೆ ಬಾರಿಸಿದ್ದಾರೆ. ಈ ವಿಡಿಯೋ ಸಾಮಜೈಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು ಹಲ್ಲೆ ನಡೆಸಿರುವ ಮೂವರನ್ನು ಬಂಧಿಸಿದ್ದಾರೆ. ಸುಂದರ್, ಶಿಲ್ಪ ಹಾಗೂ ಇನ್ನೋರ್ವ ಬಂಧಿತ ಆರೋಪಿಗಳು.