ಪ್ರಗತಿವಾಹಿನಿ ಸುದ್ದಿ: ಉಜ್ಜಯನಿ ಮಹಾಕಾಲೆಶ್ವರ ದೇವಾಲಯದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಐವರು ಅರ್ಚಕರು ಸೇರಿದಂತೆ 13 ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಡೆದಿದೆ.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಭಸ್ಮಾರತಿ ನಡೆಯುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಐವರು ಅರ್ಚಕರು, ನಾಲ್ವರು ಭಕ್ತರು ಸೇರಿದಂತೆ 13 ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆದಾಖಲಿಸಲಾಗಿದೆ. ಭಸ್ಮಾರತಿ ವೇಳೆ ಮಹಾಕಾಲಗೆ ಗುಲಾಲ್ ಅರ್ಪಿಸುವ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಧೋಳೆಂದಿ ಕಾರಣಕ್ಕೆ ಗರ್ಭಗುಡಿಯಲ್ಲಿ ಕವರ್ ಹಾಕಲಾಗಿದ್ದು, ಬೆಂಕಿ ತಗುಲಿ ಅರ್ಚಕರು ಹಾಗೂ ಭಕ್ತರ ಮೇಲೆ ಬಿದ್ದು ಗಾಯಗೊಂಡಿದ್ದಾರೆ ಎಂದು ಅರ್ಚಕ ಆಶಿಶ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ