Latest

ಭಾರತೀಯರನ್ನು ಒತ್ತೆಯಾಳಾಗಿರಿಸಿಕೊಂಡ ಉಕ್ರೇನ್?

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಈ ನಡುವೆ ಉಭಯ ರಾಷ್ಟ್ರಗಳು ಭಾರತೀಯರನ್ನು ಒತ್ತೆಯಾಳಾಗಿರಿಸಿಕೊಂಡಿವೆ ಎಂದು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಯುದ್ಧ ಪೀಡಿತ ಉಕ್ರೇನ್ ನಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದು, ಕೀವ್ ಹಾಗೂ ಖಾರ್ಕೀವ್ ನಗರಗಳನ್ನು ಬಿಟ್ಟು ತಕ್ಷಣ ಹೊರ ಬರುವಂತೆ ಒಂದೆಡೆ ಭಾರತೀಯ ರಾಯಭಾರಿ ಕಚೇರಿ ಸೂಚನೆ ನೀಡಿದೆ. ಆದರೆ ನಿರಂತರ ಬಾಂಬ್ ದಾಳಿ, ಕ್ಷಿಪಣಿ ದಾಳಿ ನಡೆಯುತ್ತಿರುವ ನಗರಗಳಿಂದ ಹೊರಬರಲು ಸಾಧ್ಯವಾಗದೇ ಭಾರತೀಯರು ಪರದಾಡುತ್ತಿದ್ದಾರೆ.

ಈ ನಡುವೆ ಉಕ್ರೇನ್, ರಷ್ಯಾ ಸೇನೆ ಭಾರತೀಯರನ್ನು ಒತ್ತೆಯಾಳಾಗಿರಿಸಿಕೊಂಡಿದೆ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವಾಲಯ, ಉಕ್ರೇನ್ ಸೈನಿಕರೇ ಭಾರತೀಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಲ್ಲದೇ, ಅವರನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ನಮಗೆ ಬೇಕಿರುವುದು ಉಕ್ರೇನ್ ಒಳಗಡೆ ಸಹಾಯ; ಭಾರತ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button