ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ನಲ್ಲಿ ರಷ್ಯಾ ಸೇನೆ 10 ದಿನವೂ ರಣಭೀಕರ ಯುದ್ಧ ಮುಂದುವರೆಸಿದೆ. ರಾಜಧಾನಿ ಕೀವ್ ವಶಕ್ಕೆ ಪಡೆಯಲು ಕೊನೇ ಹಂತದ ಯತ್ನ ನಡೆಸಿದೆ. ಮತ್ತೊಂದೆಡೆ ಓಡೆಸ್ಸಾದಲ್ಲಿ ಸೇತುವೆಯನ್ನು ಧ್ವಂಸಗೊಳಿಸಿದ್ದು, ಖಾರ್ಕೀವ್ ನಲ್ಲಿ ಬಾಂಬ್ ಸ್ಫೋಟ ಮುಂದುವರೆಸಿದೆ.
ರಷ್ಯಾ ಪ್ರಸ್ತುತ ಉಕ್ರೇನ್ ನ ಬಂದರು ನಗರಗಳನ್ನು ತನ್ನ ವಶಕ್ಕೆ ಪಡೆದಿದ್ದು, ಖೇರ್ಸನ್ ನಂತರ ಇದೀಗ ಮರಿಯುಪೋಲ್ ನಗರವನ್ನು ರಷ್ಯಾ ಸೇನೆ ಸುತ್ತುವರೆದಿದೆ. ಉಕ್ರೇನ್ ಸೇನೆ ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ಶತ ಪ್ರಯತ್ನ ನಡೆಸುತ್ತಿವೆ.
ಈ ನಡುವೆ ಯುದ್ಧದಲ್ಲಿ 9000ಕ್ಕೂ ಹೆಚ್ಚು ರಷ್ಯನ್ ಸೈನಿಕರನ್ನು ಸದೆಬಡಿದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ವಿಶ್ವಸಂಸ್ಥೆ ಮಾಹಿತಿ ಪ್ರಕಾರ ಉಕ್ರೇನ್ ನಲ್ಲಿ ಈವರೆಗೆ 1000ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ.
ಈ ಎಲ್ಲಾ ಬೆಳವಣಿಗಗಳ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಾನೂನು ಹೊರಡಿಸಿದ್ದು, ತಮ್ಮ ದೇಶ ಹಾಗೂ ಸೇನೆಯ ವಿರುದ್ಧ ನಕಲಿ ಸುದ್ದಿ ಹರಡಿದರೆ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಕಾನೂನನ್ನು ಜಾರಿ ಬೆನ್ನಲ್ಲೇ ಬಿಬಿಸಿ, ಸಿಎನ್ಎನ್, ಬ್ಲೂಮ್‌ಬರ್ಗ್ ಮತ್ತು ಇತರ ಸುದ್ದಿ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸೀಮಿತಗೊಳಿವೆ ಎಂದು ತಿಳಿದುಬಂದಿದೆ.
ಸ್ಯಾಂಡಲ್ ವುಡ್ ನಟ ಚೇತನ್ ಗೆ ಮತ್ತೊಂದು ಸಂಕಷ್ಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ