ಪ್ರಗತಿವಾಹಿನಿ ಸುದ್ದಿ; ಧಾರವಾಡ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಧಾರವಾಡ ಜಿಲ್ಲೆಯ 4 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ.
ವಿದ್ಯಾರ್ಥಿಗಳ ಮನೆಗಳಿಗೆ ಧಾರವಾಡ ಜಿಲ್ಲಾಧಿಕಾರಿ ಇಂದು ಭೇಟಿ ನೀಡಿ, ಪಾಲಕರಿಗೆ ಧೈರ್ಯಹೇಳಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಭರವಸೆಯನ್ನು ನೀಡಿದರು.
ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ಧಾರವಾಡದ ಇಬ್ಬರು, ಹುಬ್ಬಳ್ಳಿಯ ಓರ್ವ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಓರ್ವ ವಿದ್ಯಾರ್ಥಿನಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಧಾರವಾಡದ ಮಿಲನ್ ಎನ್. ದೇವಮಾನೆ, ಫೌಜಿಯಾ ಮುಲ್ಲಾ, ಹುಬ್ಬಳ್ಳಿಯ ನಾಜಿಲ್ಲಾ ಬಾಬಾಜಾನ್ ಗಾಜಿಪೂರ ಹಾಗೂ ಕುಂದಗೋಳ ತಾಲೂಕು ಯರಗುಪ್ಪಿಯ ಚೈತ್ರಾ ಸಂಶಿ ನಿವಾಸಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬುಧವಾರ ಭೇಟಿ ನೀಡಿ, ಎಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ವಿದೇಶಾಂಗ ಮಂತ್ರಾಲಯ, ಉಕ್ರೇನ್‍ನ ಕೀವ್ ನಗರದಲ್ಲಿರುವ ಭಾರತೀಯ ದೂತಾವಾಸ ಕಚೇರಿ, ಕರ್ನಾಟಕ ಸರ್ಕಾರ ಪ್ರಯತ್ನಿಸುತ್ತಿವೆ. ಅದಕ್ಕೆ ಅಗತ್ಯವಿರುವ ಸುರಕ್ಷಿತ ಸಾರಿಗೆ, ರಾಜತಾಂತ್ರಿಕ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿವೆ ಎಂದು ಪಾಲಕರಿಗೆ ವಿವರಿಸಿದರು.
ಯರಗುಪ್ಪಿಯ ವಿದ್ಯಾರ್ಥಿನಿ ಚೈತ್ರಾ ಸಂಶಿ ರೈಲಿನ ಮೂಲಕ ಪೋಲೆಂಡ್ ದೇಶದ ಗಡಿಗೆ ಬರುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಭೇಟಿಯ ಸಂದರ್ಭದಲ್ಲಿಯೇ ಪಾಲಕರಿಗೆ ಚೈತ್ರಾ ಸಂಶಿ ವಿಡಿಯೋ ಕರೆ ಮಾಡಿದ್ದರು. ಚೈತ್ರಾ ಸಂಶಿ ಅವರೊಂದಿಗೆ ಜಿಲ್ಲಾಧಿಕಾರಿಗಳು ಮಾತನಾಡಿದರು.
ಫೌಜಿಯಾ ಮುಲ್ಲಾ ರೋಮೆನಿಯಾ ದೇಶ ತಲುಪಿದ್ದಾರೆ. ಮಿಲನ್ ದೇವಮಾನೆ ಕೂಡ ಉಕ್ರೇನ್ ಗಡಿ ದಾಟುತ್ತಿದ್ದಾರೆ. ಇನ್ನೋರ್ವ ವಿದ್ಯಾರ್ಥಿನಿ ನಾಜಿಯಾ ಗಾಜಿಪೂರ ಕೂಡ ರೈಲಿನಲ್ಲಿ ಇರಬಹುದು ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ.
ರಾಯಬಾರ ಕಚೇರಿ ವಾರ್ನಿಂಗ್: ಜೀವ ಉಳಿಸಿಕೊಳ್ಳಲು ಭಾರತೀಯ ವಿದ್ಯಾರ್ಥಿಗಳ ಪರದಾಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ