Latest

ತಾಯಿಗಾಗಿ ಔಷಧ ಹುಡುಕುತ್ತಾ ಹೊರಟ ಯುವತಿ ರಷ್ಯಾ ದಾಳಿಗೆ ಬಲಿ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ 18ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ನಡೆಸಿದ ಗುಂಡಿನ ದಾಳಿಯಲ್ಲಿ ಅಮ್ಮನಿಗಾಗಿ ಔಷಧಿ ತರಲು ಹೊರಟಿದ್ದ ವೈದ್ಯೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

31 ವರ್ಷದ ವಲೇರಿಯಾ ಮಕ್ಸೆಟ್ಸ್ಕಾ ಎಂಬ ಯುವ ವೈದ್ಯೆ ರಷ್ಯಾ ದಾಳಿಗೆ ಬಲಿಯಾಗಿದ್ದಾರೆ. ಉಕ್ರೇನ್ ತೊರೆಯಲು ವಲೇರಿಯಾಗೆ ಅವಕಾಶವಿದ್ದರೂ ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸ್ಥಳೀಯರ ನೆರವಿಗಾಗಿ ನಿಂತಿದ್ದರು.

ವಲೇರಿಯಾ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾಯಂ ಆಗಿ ಅವರು ತೆಗೆದುಕೊಳ್ಳುವ ಔಷಧಿ ಖಾಲಿಯಾಗಿತ್ತು. ಹಲವೆಡೆ ಹುಡುಕಾಟ ನದೆಸಿದ್ದರೂ ಯುದ್ಧದಿಂದಾಗಿ ಔಷಧಿ ಸಿಗುತ್ತಿರಲಿಲ್ಲ. ಹೀಗಾಗಿ ವಲೇರಿಯಾ ತನ್ನ ತಾಯಿಯನ್ನು ಕರೆದುಕೊಂಡು ವಾಹನದಲ್ಲಿ ಉಕ್ರೇನ್ ನ ಪಶ್ಚಿಮ ಗಡಿ ಭಾಗದತ್ತ ಔಷಧಿ ಹುಡುಕುತ್ತಾ ಸಾಗಿದ್ದರು. ಈ ವೇಳೆ ರಷ್ಯಾ ಸೇನೆ ಗುಂಡಿನ ದಾಳಿ ನಡೆಸಿದೆ.

ರಷ್ಯಾ ದಾಳಿಗೆ ವೈದ್ಯೆ ವಲೇರಿಯಾ, ಆಕೆಯ ತಾಯಿ ಹಾಗೂ ವಾಹನ ಚಾಲಕ ಕೂಡ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಸರ್ಕಾರ ಮಾಹಿತಿ ನೀಡಿದೆ.
ಖ್ಯಾತ ನಟಿ ರೂಪಾ ದತ್ ಬಂಧನ

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button