ಉಮೇಶ್ ಕತ್ತಿ ಓರ್ವ ಬಿಂದಾಸ್ ವ್ಯಕ್ತಿಯಾಗಿದ್ದರು; ಅವರ ಹಠಾತ್ ಅಗಲಿಕೆ ಆಘಾತ ತಂದಿದೆ; ಕಂಬನಿ ಮಿಡಿದ ಅರುಣ್ ಸಿಂಗ್
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹೃದಯಾಘಾತದಿಂದ ನಿಧನರಾಗಿರುವ ಅರಣ್ಯ ಇಲಾಖೆ ಹಾಗೂ ಆಹಾರ ಸಚಿವ ಉಮೇಶ್ ಕತ್ತಿ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷ ಹಾಗೂ ಇಡೀ ನಾಡಿಗೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಉಮೇಶ್ ಕತ್ತಿ ಭೇಟಿಯಾದಾಗಲೆಲ್ಲ ಕರ್ನಾಟಕದ ಸಂಪೂರ್ಣ ಅಭಿವೃದ್ಧಿ, ಪಕ್ಷದ ಬೆಳವಣಿಗಳ ಕುರಿತು ಸದಾ ಚರ್ಚಿಸುತ್ತಿದ್ದರು. ಅವರು ಒಬ್ಬ ಬಿಂದಾಸ್ ವ್ಯಕ್ತಿ. ನೇರ ನಡೆ ನುಡಿಯುಳ್ಳ ಅನುಭವಿ ನಾಯಕ. ಆತ್ಮೀಯ ಸ್ನೇಹಿತನನ್ನು ಏಕಾಏಕಿ ಕಳೆದುಕೊಂಡಿರುವುದು ನೋವುತಂದಿದೆ ಎಂದರು.
ಉಮೇಶ್ ಕತ್ತಿ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಗೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುತ್ತಿದ್ದೇನೆ. ಅವರ ಕುಟುಂಬಕ್ಕೆ, ಬೆಂಬಲಿಗರಿಗೆ ಉಮೇಶ್ ಕತ್ತಿ ಅಗಲಿಕೆಯ ದು:ಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಡಾ.ಸುಧಾಕರ್, ಸಂಪುಟದ ಸಹೋದ್ಯೋಗಿ, ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ಹಾಗೂ ನಾಡಿಗೆ ತುಂಬಲಾರದ ನಷ್ಟ. ಮೊನ್ನೆ ರಾತ್ರಿ ತೀವ್ರ ಎದೆನೋವಿನಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಉಮೇಶ್ ಕತ್ತಿ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಕೆಲ ನಿಮಿಷಗಳಲ್ಲೇ ನನಗೆ ಕರೆ ಬಂದಿತ್ತು, ತಕ್ಷಣ ನಾನು ಆಸ್ಪತ್ರೆಗೆ ಧಾವಿಸಿದ್ದೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸತತ ಪ್ರಯತ್ನ ಮಾಡಿದ್ದರು. ಆದರೂ ವಿಧಿಯಾಟದ ಮುಂದೆ ಸಚಿವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಅಗಲಿಕೆ ನೋವು ತಂದಿದೆ ಎಂದರು.
ಉಮೇಶ್ ಕತ್ತಿಯವರ ಸಮಯೋಚಿತ ದೂರದೃಷ್ಟಿಯ ಎಲ್ಲಾ ಯೋಜನೆಗಳನ್ನು ಸರ್ಕಾರ ಮುಂದುವರೆಸಿಕೊಂಡು ಹೋಗುತ್ತದೆ. ಹಿಡಕಲ್ ಜಲಾಶಯದಲ್ಲಿ ಒಂದು ಉದ್ಯಾನವನ ನಿರ್ಮಿಸಬೇಕು ಎಂಬ ಅವರ ಕೋರಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.
ಅಮಿತ್ ಶಾ ಭೇಟಿ ವೇಳೆ ಭದ್ರತೆ ಲೋಪ; ವ್ಯಕ್ತಿ ಬಂಧನ
https://pragati.taskdun.com/latest/amit-shahmumbaivisitsecurity-lapesone-aressted/
ಎರಡು ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ದುರ್ಮರಣ
https://pragati.taskdun.com/latest/two-caraccident3-deathuttara-kannada/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ