ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ನಾನು ಮಠಾಧೀಶನಲ್ಲ, ನಾನೊಬ್ಬ ರಾಜಕಾರಣಿ. ಹಾಗಾಗಿ ನಾನೂ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ನನಗೂ ಸಿಎಂ ಆಗುವ, ಸಾಧ್ಯವಾದರೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿವೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ನಾನು 9 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಯಾವುದೇ ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಸಿಎಂ ಬದಲಾದಾಗ ಅಥವಾ ಮುಂದಿನ ಚುನಾವಣೆಯಾದಾಗ ನಾನೂ ಸಿಎಂ ಸ್ಥಾನದ ಆಕಾಂಕ್ಷಿ. ಬೈ ಲಕ್ ಇದೇ ಅವಧಿಯಲ್ಲಿ ಅವಕಾಶ ಸಿಕ್ಕರೂ ನಿಭಾಯಿಸುತ್ತೇನೆ. ಇನ್ನು 15 ವರ್ಷಗಳಲ್ಲಿ ನಾನು ಮುಖ್ಯಮಂತ್ರಿಯಾಗಬೇಕು, ಎಲ್ಲದಕ್ಕೂ ನಸೀಬು ಬೇಕು ಅಷ್ಟೇ. ಸಾಧ್ಯವಾದರೆ ಪ್ರಧಾನಿಯಾಗಬೇಕು ಎಂಬ ಪ್ರಯತ್ನವೂ ಇದೆ ಎಂದರು.
ಯಾವುದೇ ರಾಜಕಾರಣಿಗೂ ಮೊದಲು ಶಾಸಕ, ನಂತ್ರ ಮಂತ್ರಿ, ಆನಂತರ ಮುಖ್ಯಮಂತ್ರಿ, ಸಾಧ್ಯವಾದರೆ ಪ್ರಧಾನ ಮಂತ್ರಿಯಾಗಬೆಕು ಎಂಬ ನಿಟ್ಟಲ್ಲೂ ಪ್ರಯತ್ನಗಳುತ್ತವೆ. ಹಾಗೇ ನಾನೂ ಕೂಡ ಮುಂದೆ ಸಿಎಂ ಹುದ್ದೆ ಆಕಾಂಕ್ಷಿ ಎಂಬುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ಕೇಸ್; ತನಿಖೆ ಮುಕ್ತಾಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ