ಪ್ರಗತಿವಾಹಿನಿ ಸುದ್ದಿ; ಗೋಕಾಕ: ಸದಾ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ನಾಡಿನ ಹಿರಿಯ ರಾಜಕಾರಣಿ, ಸಚಿವ ಉಮೇಶ ಕತ್ತಿ ಅವರ ನಿಧನದಿಂದ ಇಡೀ ರಾಜ್ಯಕ್ಕೆ ಅಪಾರ ಹಾನಿಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದರು.
ಇಲ್ಲಿಯ ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅಗಲಿದ ಸಚಿವ ಉಮೇಶ ಕತ್ತಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಸಚಿವ ಉಮೇಶ ಕತ್ತಿ ಅವರು ಯಾವಾಗಲೂ ಅಭಿವೃದ್ಧಿಯ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಬಗ್ಗೆ ಅವರಿಗಿರುವ ಕಾಳಜಿ ಎಂದಿಗೂ ಮರೆಯಲಿಕ್ಕೆ ಆಗದು ಎಂದು ಹೇಳಿದರು.
ತಮ್ಮ ಹಾಗೂ ಕತ್ತಿ ಕುಟುಂಬ ಕಳೆದ 30 ವರ್ಷಗಳಿಂದ ಒಂದೇ ಕುಟುಂಬದವರಂತೆ ಇದ್ದೇವೆ. ಕತ್ತಿ ಅವರು ನನಗೆ ಹಿರಿಯ ಸಹೋದರನಂತೆ ಇದ್ದರು. 8 ಬಾರಿ ವಿಧಾನಸಭಾ ಸದಸ್ಯರಾಗಿ ಅಪ್ರತಿಮ ಸೇವೆ ಸಲ್ಲಿಸಿದ್ದರು. ಸಹಕಾರಿ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಉತ್ತರ ಕರ್ನಾಟಕಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದ ಉಮೇಶ ಕತ್ತಿ ಅವರು, ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಅವರು ಸದಾ ಹೋರಾಟ ಮಾಡುತ್ತಿದ್ದರು. ನೇರ, ನಿಷ್ಠುರವಾದಿಯಾಗಿದ್ದ ಕತ್ತಿ ಅವರ ಅಕಾಲಿಕ ನಿಧನದಿಂದ ನಮ್ಮ ಜಿಲ್ಲೆ, ರಾಜ್ಯ ಹಾಗೂ ಬಿಜೆಪಿಗೆ ದೊಡ್ಡ ನಷ್ಟವಾಗಿದೆ. ಕತ್ತಿ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ಮಧ್ಯಪಾನ ಸ್ವಯಂ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಜಿಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಧಾರವಾಡ ರಂಗಾಯಣ ಅಧ್ಯಕ್ಷ ರಮೇಶ ಪರವಿನಾಯ್ಕರ, ಈರಣ್ಣ ಜಾಲಿಬೇರಿ, ಸುಭಾಸ ಕುರಬೇಟ, ನಿಂಗಪ್ಪಗೌಡ ನಾಡಗೌಡ, ಚಿದಾನಂದ ದೇಮಶೆಟ್ಟಿ, ಶಕೀಲ ಧಾರವಾಡಕರ, ಮುತ್ತೆಪ್ಪ ಮನ್ನಾಪೂರ, ಲಕ್ಷ್ಮಣ ಮಸಗುಪ್ಪಿ, ಕಲ್ಲಪ್ಪ ರಂಜಣಗಿ, ಗುರುರಾಜ ಪಾಟೀಲ, ಮಹಾದೇವ ನಾಡಗೌಡ, ಸಿದ್ರಾಮ ಕುಳ್ಳೂರ, ಇಮಾಮ ಮೋಮಿನ, ಭೀಮಶಿ ಹೂವಣ್ಣವರ, ರಾಜೇಸಾಬ ಬಳಿಗಾರ, ಪ್ರಮೋದ ನುಗ್ಗಾನಟ್ಟಿ, ಸಿ.ಎಲ್. ನಾಯ್ಕ, ಜಂಬು ಚಿಕ್ಕೋಡಿ, ಅಲ್ಲಪ್ಪ ಗಣೇಶವಾಡಿ, ಭೀಮಶಿ ಬಂಗಾರಿ, ಬಿಜೆಪಿ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
ಸಚಿವ ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಪುಷ್ಪಾರ್ಪಣೆ ಮಾಡಿದರು. ನಂತರ ಮೃತರ ನಿಧನಕ್ಕೆ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.
ಬೆಲ್ಲದ ಬಾಗೇವಾಡಿಗೆ ಆಗಮಿಸಿದ ಸಚಿವ ಉಮೇಶ್ ಕತ್ತಿ ಪಾರ್ಥಿವ ಶರೀರ
https://pragati.taskdun.com/latest/belagaviumesh-kattideadbodybellada-bagewadi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ