Latest

*ಫೆ. 4 ರಂದು ಅನುದಾನ ರಹಿತ ಶಾಲೆಗಳ ಸಮ್ಮೇಳನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಅನುದಾನ ರಹಿತ ಶಾಲೆಗಳ ಸಮಸ್ಯೆಗಳ ಪರಿಹಾರದ ಬಗ್ಗೆ ನಿರಂತರವಾಗಿ ಹೋರಾಡುತ್ತಿರುವ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು (ಕುಸ್ಮ) ಬರುವ ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ವಿಶೇಷ ಸಮ್ಮೇಳನ ನಡೆಸಲು ಉದ್ದೇಶಿಸಿದೆ.

ಈ ಬಗ್ಗೆ ಇಂದು ಈ ಸಂಘಟನೆಯ ಅಧ್ಯಕ್ಷ ಎಸ್. ಸತ್ಯಮೂರ್ತಿ ಮತ್ತು ಕಾರ್ಯದರ್ಶಿ ಎ. ಮರಿಯಪ್ಪ ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿರುವ ಆರ್. ವಿ. ಟೀಚರ್ಸ್ ಕಾಲೇಜಿನಲ್ಲಿ ಫೆ. 4 ರಂದು ಬೆಳಿಗ್ಗೆ 9:30ಕ್ಕೆ ಕುಸ್ಮದ 40ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಈ ವಿಶೇಷ ಸಮ್ಮೇಳನದಲ್ಲಿ, ಅನುದಾನ ರಹಿತ ಶಾಲೆಗಳ ಸಮಸ್ಯೆ, ನ್ಯಾಯಾಲಯದ ಇತ್ತೀಚಿನ ತೀರ್ಪು, ಇಎಸ್ಐ, ಗ್ರಾಚುಟಿ, ಮಾನ್ಯತೆ ನವೀಕರಣ, ಪ್ರಾಪರ್ಟಿ ತೆರಿಗೆ, ಸರ್ಕಾರದ ನೂತನ ಆದೇಶಗಳ ಬಗ್ಗೆ ವಿವಿಧ ತಜ್ಞರಿಂದ ಮಾರ್ಗದರ್ಶನ – ಉಪನ್ಯಾಸ ಶಿಬಿರಗಳನ್ನು ಏರ್ಪಡಿಸಿರುವುದರಿಂದ ನಾಡಿನ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಹಲವಾರು ಶಿಕ್ಷಣ ತಜ್ಞರು ಮತ್ತು ಕಾನೂನು ತಜ್ಞರು ಈ ಸಮ್ಮೇಳನಾ ಶಿಬಿರದಲ್ಲಿ ಭಾಗವಹಿಸುತ್ತಿರುವುದರಿಂದ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ಆಡಳಿತ ಮಂಡಳಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಶಿಕ್ಷಣ ತಜ್ಞ ಜಿ. ಎಸ್. ಶರ್ಮಾ ಅವರ ನೇತೃತ್ವದಲ್ಲಿ 1984 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆಯು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಿತರಕ್ಷಣಗಾಗಿ ಹೋರಾಡಿದ ಇತಿಹಾಸ ಹೊಂದಿದೆ. ಇತ್ತೀಚೆಗೆ ಸರ್ಕಾರದ ಭಾಷಾ ನೀತಿಯ ಕುರಿತು ಈ ಸಂಘಟನೆಯು ನ್ಯಾಯಾಂಗ ಹೋರಾಟ ನಡೆಸಿ ಜಯಗಳಿಸಿದ್ದನ್ನು
ಸ್ಮರಿಸಬಹುದಾಗಿದೆ.

 

*ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಗಂಡು ಮಕ್ಕಳಿಗೆ ಕಲಿಸಿದಾಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ಸಾಧ್ಯ; ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ*

https://pragati.taskdun.com/chief-justice-prasanna-b-varalefoundation-stone-laying-ceremony-for-court-buildingsbelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button