*ಕೇಂದ್ರ ಬಜೆಟ್-2023 ಕ್ಷಣಗಣನೆ; ಕೆಂಪು ಸೀರೆಯಲ್ಲಿ ಗಮನ ಸೆಳೆದ ವಿತ್ತ ಸಚಿವೆ; ಆಯವ್ಯಯಕ್ಕೆ ರಾಷ್ಟ್ರಪತಿಗಳ ಅಂಕಿತ*
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್-2023 ಮಂಡಿಸಲಿದ್ದಾರೆ. 2024ರ ಲೋಕಸಭಾ ಚುನಾವಣೆ ನಡೆಯಲಿರುವ ಮುಂದಿನ ವರ್ಷದ ಬಜೆಟ್ ಇಡೀ ಆರ್ಥಿಕ ವರ್ಷಕ್ಕೆ ಊರ್ಜಿತಗೊಳ್ಲುವುದಿಲ್ಲ. ಹಾಗಾಗಿ ಇದು ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯೇ ಪೂರ್ಣ ಪ್ರಮಾಣದ ಬಜೆಟ್ ಆಗಿದ್ದು, 2023ರಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿ ಇಂದು ಮಂಡನೆಯಾಗಲಿರುವ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಿವೆ.
ಬೆಳಿಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 5ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಮೊದಲು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಗವತ್ ಕೃಷ್ಣರಾವ್ ಕರಡ್, ತಮ್ಮ ಮನೆಯಲ್ಲಿ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ನೆರವೇರಿಸಿದರು. ಬಜೆಟ್ ಮಂಡನೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.
ಬಳಿಕ ಕೇಂದ್ರ ಹಣಕಾಸು ಸಚಿವಾಲಯದಿಂದ ಬಜೆಟ್ ದಾಖಲೆ ಸ್ವೀಕರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ದಾಖಲೆಗಳನ್ನು ತೋರಿಸಿದರು. ಈ ವರ್ಷವೂ ವಿತ್ತ ಸಚಿವೆಯ ಸೀರೆ ಗಮನ ಸೆಳೆದಿದೆ. ಬಜೆಟ್ ದಾಖಲೆಯ ಟ್ಯಾಬ್ಲೆಟ್ ಗೆ ಸುತ್ತಿರುವ ಕೆಂಪು ಹೊದಿಕೆಗೆ ಹೊಂದುವಂತಹ ಮ್ಯಾಚಿಂಗ್ ಬಣ್ಣದ ಕೆಂಪು ಸೀರೆಯುಟ್ಟಿರುವುದು ಗಮನ ಸೆಳೆಯಿತು.
ಬಳಿಕ ರಾಷ್ಟ್ರಪತಿ ಭವನಕ್ಕೆ ತೆರಳಿದ ನಿರ್ಮಾಲಾ ಸೀತಾರಾಮನ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬಜೆಟ್ ಮಂಡನೆಗೆ ಅಂಕಿತ ಪಡೆದುಕೊಂಡರು. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಎಲ್ಲಾ ವರ್ಗ, ಕ್ಷೇತ್ರಗಳ ನಿರೀಕ್ಷೆಗೆ ತಕ್ಕಂತೆ ಆದ್ಯತೆ ನೀಡುವ ಸಾಧ್ಯತೆ ಇದೆ.
*ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ; ನಮ್ಮದೇ ರಾಜ್ಯದಲ್ಲಿ ನಡೆದ ಪೈಶಾಚಿಕ ಕೃತ್ಯ ಬೆಳಕಿಗೆ*
https://pragati.taskdun.com/13-years-girlrapefatherkalaburgi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ