Kannada NewsLatest

*ಪ್ರಮುಖ ಸಮಸ್ಯೆಗಳಿಗೆ ಬಜೆಟ್ ನಲ್ಲಿ ಉತ್ತರವಿಲ್ಲ: ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೇಂದ್ರ ಬಜೆಟ್ ಕೇವಲ ಚುನಾವಣೆ ಉದ್ದೇಶಕ್ಕಾಗಿ ಮಂಡಿಸಿದ ಬಜೆಟ್. ಕೇವಲ ಸುಳ್ಳು ಬರವಸೆಗಳನ್ನು ಘೋಷಣೆ ಮಾಡಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಿಡಿ ಕಾರಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬೆಲೆ ಏರಿಕೆ ನಿಯಂತ್ರಣಕ್ಕೆ ಬಜೆಟ್ ನಲ್ಲಿ ಯಾವುದೇ ಕ್ರಮಗಳೂ ಇಲ್ಲ. ಯುವ ಸಮುದಾಯಕ್ಕಾಗಿ, ನಿರುದ್ಯೋಗಿ ಯುವ ಜನರಿಗಾಗಿ ಬಜೆಟ್ ನಲ್ಲಿ ಯಾವುದೇ ಭರಸೆಗಳು, ಆಶಾದಾಯಕ ಯೋಜನೆಗಳೂ ಇಲ್ಲ ಎಂದು ಹೇಳಿದರು.

ಭ್ರದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಣೆ ಬಿಟ್ಟರೆ ರಾಜ್ಯಕ್ಕೆ ಅಂತಹ ಯ್ಯಾವುದೇ ಮಹತ್ವದ ಘೋಷಣೆ, ಅನುದಾನಗಳನ್ನೂ ನೀಡಿಲ್ಲ. ಕರ್ನಾಟಕದ ಬಗ್ಗೆ ಕೇಂದ್ರದ ತಾತ್ಸಾರ ಬಜೆಟ್ ನಲ್ಲಿ ಕಂಡುಬರುತ್ತಿದೆ. ಇದೊಂದು ನಿರಾಶಾದಾಯಕ ಬಜೆಟ್ ಎಂದು ತಿಳಿಸಿದ್ದಾರೆ.

 

Home add -Advt

*ಬಡವರಿಗೆ, ಹಣದುಬ್ಬರ ನಿಯಂತ್ರಣಕ್ಕೆ ಯಾವುದೇ ಕ್ರಮಗಳೂ ಇಲ್ಲ; ಕೇಂದ್ರ ಬಜೆಟ್ ಬಗ್ಗೆ ಖರ್ಗೆ ವಾಗ್ದಾಳಿ*

https://pragati.taskdun.com/union-budget-2023mallikarjuna-khargereaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button