
ಪ್ರಗತಿವಾಹಿನಿ ಸುದ್ದಿ: 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಕೆಲ ವಸ್ತುಗಳ ಮೇಲಿನ ಕಸ್ಟಮ್ಸ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಇದರಿಂದ ಕೆಲ ವಸ್ತುಗಳ ಬೆಲೆ ಇಳಿಕೆಯಾಗಿದೆ.
ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮೊಬೈಲ್, ಚಾರ್ಜರ್, ಸೋಲಾರ್ ಪ್ಯಾನಲ್ ಗಳ ಮೇಲಿನ ತೆರಿಗೆ ಇಳಿಸುವುದಾಗಿ ಘೋಷಿಸಿದ್ದಾರೆ.
ಅಲ್ಲದೇ ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ.6ರಷ್ಟು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಮೊಬೈಲ್, ಚಾರ್ಜರ್, ಸೋಲಾರ್ ಪ್ಯಾನಲ್ ಗಳ ದರ ಇಳಿಕೆಯಾಗಲಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ ದರ ಕೂಡ ಇಳಿಕೆಯಾಗಲಿದೆ.
ಇನ್ನು ಮೂರು ಕ್ಯಾನ್ಸರ್ ಔಷಧಿಗಳ ಬೆಲೆ ಕಡಿಮೆಯಾಗಲಿವೆ. ಎಕ್ಸ್ ರೇ ಟ್ಯೂಬ್ ಗಳು, ಫ್ಲಾಟ್ ಪ್ಯಾನಲ್ ಡಿಟೆಕ್ಟರ್ ಗಳ ಮೇಲಿನ ಕಸಮ್ಸ್ ತೆರಿಗೆ ಶೇ.6ರಷ್ಟು ಇಳಿಕೆ.
ಟಿವಿ, ಇ-ಕಾಮರ್ಸ್, ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ.