Latest

ಕುತೂಹಲ ಮೂಡಿಸಿದ ಅಮಿತ್ ಶಾ- ರೋಹಿತ್ ಶೆಟ್ಟಿ ಭೇಟಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಎರಡು ದಿನಗಳ ಮುಂಬೈ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ಬಾಲಿವುಡ್ ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ.

ತಮ್ಮ ಟ್ವಿಟರ್‌ ಶಾ ಸಭೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಪ್ರಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರನ್ನು ಇಂದು ಮುಂಬೈನಲ್ಲಿ ಭೇಟಿ ಮಾಡಲಾಯಿತು” ಎಂದು ಬರೆದಿದ್ದಾರೆ.

Home add -Advt

ಆದರೆ ಈ ಭೇಟಿಯ ಹಿಂದಿನ ಕಾರಣಗಳನ್ನು ಅವರು ಈವರೆಗೂ ಬಹಿರಂಗಪಡಿಸಿಲ್ಲ. ಹೀಗಾಗಿ ಈ ಭೇಟಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

‘ಸಿಂಗಮ್’ ನಿರ್ದೇಶಕ ರೋಹಿತ್ ಅವರ ನಿರ್ದೇಶನದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಶಿಲ್ಪಾ ಶೆಟ್ಟಿ ಅವರ ಅಭಿನಯದಲ್ಲಿ ‘ಇಂಡಿಯನ್ ಪೊಲೀಸ್ ಫೋರ್ಸ್’ ಚಿತ್ರ ಮುಂಬರುವ ದಿನಗಳಲ್ಲಿ  ತೆರೆ ಕಾಣಲಿದೆ.

ಕನ್ಯತ್ವ ಸಾಬೀತುಪಡಿಸಲು ವಿಫಲವಾಗಿದ್ದಕ್ಕೆ ನವ ವಿವಾಹಿತೆ ಮೇಲೆ ದೌರ್ಜನ್ಯ; ಮಾವನಿಗೆ ಬಿತ್ತು 10 ಲಕ್ಷ ರೂ. ದಂಡ!

Related Articles

Back to top button