Latest

ಅನ್ ಲಾಕ್ 3.O ನಾಳೆ ಅಂತ್ಯ: ಮುಂದೇನು?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಸಧ್ಯ ಜಾರಿಯಲ್ಲಿರುವ ಅನ್ ಲಾಕ್ 3.O ಸೋಮವಾರ ಅಂತ್ಯವಾಗಲಿದೆ. ಮುಂದೇನು?

ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಾಕ್ ಡೌನ್ ಜಾರಿಯಲ್ಲಿದ್ದ ರಾಜ್ಯದಲ್ಲಿ ಜುಲೈ 3ರಂದು 2 ವಾರದ ಮಟ್ಟಿಗೆ ಅನ್ ಲಾಕ್ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಅದು ಜುಲೈ 19, ಸೋಮವಾರ ಅಂತ್ಯವಾಗಲಿದೆ.

Home add -Advt

ಕೊರೋನಾ ನಿಯಂತ್ರಣಕ್ಕೆ ಬರದಿದ್ದಲ್ಲಿ, ಜನರು ಮಾರ್ಗಸೂಚಿ ಅನುಸರಿಸದಿದ್ದಲ್ಲಿ ಮತ್ತೆ ಲಾಕ್ ಡೌನ್ ಮಾಡಬೇಕಾದೀತು ಎನ್ನುವ ಎಚ್ಚರಿಕೆಯನ್ನು ಸಿಎಂ ಕೆಲವು ದಿನಗಳ ಹಿಂದೆ ನೀಡಿದ್ದರು.

ಆದರೆ ರಾಜ್ಯದಲ್ಲಿ ಸಧ್ಯ ಕೊರೋನಾ ಗಣನೀಯವಾಗಿ ಇಳಿಕೆಯಾಗಿದೆ. ಪಾಸಿಟಿವಿಟಿ ದರ ಶೇ.1.45ಕ್ಕೆ ಇಳಿದಿದೆ. ಸಾವಿನ ಪ್ರಮಾಣವೂ ಸಾಕಷ್ಟು ಕಡಿಮೆಯಾಗಿದೆ. ಹಾಗಾಗಿ ಮತ್ತೆ ಲಾಕ್ ಡೌನ್ ಮಾಡುವ ಸಾಧ್ಯತೆ ಇಲ್ಲ.

ಆದರೆ ಇನ್ನೂ ಕೆಲವು ಕ್ಷೇತ್ರಗಳು ಅನ್ ಲಾಕ್ ಆಗಬೇಕಾದದ್ದು ಬಾಕಿ ಇವೆ. ಅವುಗಳನ್ನೂ ಸಂಪೂರ್ಣ ಅನ್ ಲಾಕ್ ಮಾಡುವ ಸಾಧ್ಯತೆ ಇದೆ. ಭಾನುವಾರ ಸಂಜೆ ಅಥವಾ ಸೋಮವಾರದ ಹೊತ್ತಿಗೆ ಸರಕಾರ ರಾಜ್ಯದಲ್ಲಿ ಸಂಪೂರ್ಣ ಅನ್ ಲಾಕ್ ಮಾಡುವ ಪ್ರಕಟಣೆ ಹೊರಡಿಸಬಹುದು.

ವಾರಾಂತ್ಯದ ಲಾಕ್ ಡೌನ್ ನನ್ನು ಸಂಪೂರ್ಣ ತೆಗೆದುಹಾಕಿ ರಾತ್ರಿ ಲಾಕ್ ಡೌನನ್ನು ಇನ್ನೂ ಕೆಲವು ದಿನ ಮುಂದುವರಿಸುವ ಸಾಧ್ಯತೆ ಇದೆ.

ಜುಲೈ 19ರಿಂದ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್?

ಸೋಮವಾರದಿಂದ ರಾಜ್ಯಾದ್ಯಂತ ಅನ್ ಲಾಕ್ 3.0 ಜಾರಿ (Updated)

Related Articles

Back to top button