*ಅಥಣಿ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಲೀಲಾ ಸದಾಶಿವ ಬಟಾಳಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಭುವನೇಶ್ವರಿ ಬೀರಪ್ಪ ಯಕ್ಕಂಚಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಲೋಕಸಭೆ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ ಅವರ ಒಮ್ಮತದ ನಿರ್ಧಾರ ಹಾಗೂ ಪುರಸಭೆಯ 27 ಸದಸ್ಯರ ಸಮ್ಮತಿಯೊಂದಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಅಥಣಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅವಿರೋಧವಾಗಿ ಆಯ್ಕೆಯಾಯಿತು.
ಅಥಣಿ ಪುರಸಭೆಯಲ್ಲಿ ಒಟ್ಟು 27 ಸದಸ್ಯ ಬಲ ಹೊಂದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಶಿವಲೀಲಾ ಬುಟಾಳಿಯವರಿಂದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿತ್ತು. ಉಪಾಧ್ಯಕ್ಷ ಸ್ಥಾನ ಓಬಿಸಿ ಮಹಿಳೆಗೆ ಮೀಸಲಾಗಿದ್ದು ಭುವನೇಶ್ವರಿ ಬೀರಪ್ಪ ಯಕ್ಕಂಚಿ ಅವರಿಂದ ಮಾತ್ರ ನಾಮಪತ್ರ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಅವಿರೋಧವಾಗಿ ಅಧಿಕಾರದ ಗದ್ದುಗೆ ಏರಿದ್ದಾರೆ.
ಈ ವೇಳೆ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾಧ್ಯಮಗಳೊಂದಿಗೆ ಮಾತನಾಡಿ ಅಥಣಿ ಪುರಸಭೆಗೆ ಮುಂದಿನ 30 ತಿಂಗಳು ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಇಂದು ಜರುಗಿದೆ. ಅಥಣಿ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಪಕ್ಷ ಭೇದವಿಲ್ಲದೆ, ಭಿನ್ನಾಭಿಪ್ರಾಯ ಇಲ್ಲದೆ ಈ ಆಯ್ಕೆ ಜರುಗಿದೆ. ಬಹಳಷ್ಟು ಹಳೆಯದಾದ ಪುರಸಭೆಗೆ ಜೋಡಿ ಕೆರೆ ಅಭಿವೃದ್ಧಿ ಸೇರಿದಂತೆ ಪಟ್ಟಣದಲ್ಲಿ ಹತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಬರುವ ದಿನದಲ್ಲಿ ಸರ್ವಾಂಗಿಣ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಅನಂತರ ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಅವರು ಮಾತನಾಡಿ, ಸತೀಶ ಜಾರಕಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯ್ಕೆಯಾದ ಅಭ್ಯರ್ಥಿಗಳು ಅಥಣಿ ಅಭಿವೃದ್ದಿಯನ್ನು ಮಾಡಲಿದ್ದಾರೆ ಎಂದರು.
ಈ ವೇಳೆ ತಹಶೀಲ್ದಾರ್ ಸಿದ್ದರಾಯ ಬೋಸಗಿ ಚುನಾವಣಾಧಿಕಾರಿಯಾಗಿ ಮತ್ತು ಸಹಾಯಕ ರಾಗಿ ಮಹಮ್ಮದ್ ರಫಿ ಯತ್ನಟ್ಟಿ, ಶಶಿಕಾಂತ ಡಂಗಿ, ಬಸವರಾಜ್ ಡಾಬಳ್ಳಿ , ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದರು, ಈ ವೇಳೆ ಮುಖಂಡರಾದ ಸದಾಶಿವ ಬುಟಾಳಿ, ಶಿವಕುಮಾರ ಸವದಿ, ಚಿದಾನಂದ ಮುಕುಣಿ, ರಮೇಶ ಸಿಂದಗಿ, ರಾವಸಾಬ ಐಹೊಳೆ, ದಿಲೀಪ ಲೋಣಾರೆ, ದತ್ತಾ ವಾಸ್ಟರ್, ಬೀರಪ್ಪ ಯಂಕಂಚಿ, ಬಸವರಾಜ ಹಳ್ಳದಮಳ, ಸಯ್ಯದಮೀನ ಗದ್ಯಾಳ, ಬಾಬು ಖೆಮಲಾಪೂರ, ವಿಲೀನರಾಜ ಯಳಮಲ್ಲೆ, ಉದಯ ಸೊಳಸಿ, ಪ್ರಮೋದ ಬಿಳ್ಳೂರ, ರವಿ ಬಡಕಂಬಿ, ಸಚಿನ ಬುಟಾಳಿ, ಮಲ್ಲು ಬುಟಾಳಿ, ಇಸಾಕ ನದಾಫ, ವಿಶ್ವಾನಾಥ ಗಡದೆ, ರಮೇಶ ಪವಾರ, ಮಲ್ಲು ಹುದ್ದಾರ, ಅಸೀಫ ತಾಂಬೋಳಿ, ಬಸವರಾಜ ಬುಟಾಳಿ, ರಿಯಾಜ ಸನದಿ, ಸಂತೋಷ ಸಾವಡಕರ, ವೆಂಕಟೇಶ, ರಾಜು ಗುಡೋಡಗಿ, ರಾಜು ಬುಲಬುಲೆ, ಅಸ್ಲಂ ನಾಲಬಂದ, ತಿಪ್ಪಣ್ಣಾ ಭಜಂತ್ರಿ, ಶ್ರೀಶೈಲ ನಾಯಿಕ, ಅರುಣ ಭಾಸಿಂಗಿ, ಶಿವಾನಂದ ಪಾಟೀಲ ಸೇರಿದಂತೆ ಅನೇಕರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ