ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ-ಯುಪಿಎಸ್ ಸಿ ಫಲಿತಾಂಶ ಪ್ರಕಟವಾಗಿದ್ದು, 761 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
18 ಮಂದಿ ಕನ್ನಡಿಗರು ತೇರ್ಗಡೆಗೊಂಡಿದ್ದು, ಕರ್ನಾಟಕದ ಅಕ್ಷಯ್ ಸಿಂಹ 77ನೇ ಸ್ಥಾನಗಳಿಸಿಕೊಂಡಿದ್ದಾರೆ.
ಮಾಲೇಬೆನ್ನೂರಿನ ಶ್ರೀನಿವಾಸ್ 235ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ತೇರ್ಗಡೆಗೊಂಡ 18 ಅಭ್ಯರ್ಥಿಗಳ ಪೈಕಿ 15 ಅಭ್ಯರ್ಥಿಗಳು ಇಂಡಿಯಾ ಫಾರ್ ಐಎ ಎಸ್ ಸಂಸ್ಥೆಯಿಂದ ತರಬೇತಿ ಪಡೆದವರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಶಕೀರ್ ಅಹ್ಮದ್ 583ನೇ ರ್ಯಾಂಕ್ ಪಡೆದಿದ್ದಾರೆ.
ಐಐಟಿ ಬಾಂಬೆಯ ಶುಭಂ ಕುಮಾರ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದರೆ, ಜಾಗೃತಿ ಅವಸ್ಥಿ ಎರಡನೇ ರ್ಯಾಂಕ್, ಅಂಕಿತ್ ಜೈನ್ ಮೂರನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಮತದಾರರ ಪಟ್ಟಿ ಸೇರ್ಪಡೆ, ತಿದ್ದುಪಡಿಗಾಗಿ ಇಲ್ಲಿದೆ ಆ್ಯಪ್: ಡೌನ್‌ಲೋಡ್ ಮಾಡಿಕೊಳ್ಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ