Kannada NewsLatest

UPSCಯಲ್ಲಿ 250ನೇ ರ್ಯಾಂಕ್ ಪಡೆದು ಆಯ್ಕೆಯಾದ ಬೈಲಹೊಂಗಲದ ಯುವತಿ

 

ಸುದ್ದಿ; ಬೆಳಗಾವಿ; ಕೇಂದ್ರ ಲೋಕಸೇವಾ ಆಯೋಗ-ಯುಪಿಎಸ್ ಸಿ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ ಜಿಲ್ಲೆ ಬೈಲಹೊಂಗಲದ ಯುವತಿ ಸಾಹಿತ್ಯ 250ನೇ ರ್ಯಾಂಕ್ ಪಡೆದು ಆಯ್ಕೆಯಾಗಿದ್ದಾರೆ.

ಯುಪಿಎಸ್ ಸಿಯಲ್ಲಿ ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ ಕರ್ನಾಟಕದ ಒಟ್ಟು 24 ಅಭ್ಯರ್ಥಿಗಳಿದ್ದಾರೆ. ಬೈಲಹೊಂಗಲದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ 250ನೇ ರ್ಯಾಂಕ್ ಪಡೆದು ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Home add -Advt

ಕಳೆದ 6 ವರ್ಷಗಳಿಂದ ಯುಪಿಎಸ್ ಸಿ ಪರೀಕ್ಷೆಗಾಗಿ ತಯಾರಿ ನಡೆಸಿದ್ದ ಸಾಹಿತ್ಯ ಒಂದು ವರ್ಷದಿಂದ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಇದೀಗ ಕಠಿಣ ಪರಿಶ್ರಮದ ಮೂಲಕ ಸಾಹಿತ್ಯ ಆಯ್ಕೆಯಾಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
UPSC ಅಂತಿಮ ಫಲಿತಾಂಶ ಪ್ರಕಟ;ಮೊದಲ ರ್ಯಾಂಕ್ ಪಡೆದ ಶ್ರುತಿ ಶರ್ಮಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button