LatestWorld

*ಭಾರತಕ್ಕೆ 131 ಮಿಲಿಯನ್ ಡಾಲರ್ ಮಿಲಿಟರಿ ಸ್ವತ್ತುಗಳ ಪೂರೈಕೆಗೆ ಅಮೇರಿಕಾ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ: ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಅಮೆರಿಕವು ಭಾರತಕ್ಕೆ 131 ಮಿಲಿಯನ್ ಅಮೆರಿಕನ್ ಡಾಲರ್ ನೇರವು ನೀಡುದಾಗಿ ಘೋಷಣೆ ಮಾಡಿದೆ.

ಮಿಲಿಟರಿ ಹಾರ್ಡ್‌ವೇರ್ ಮತ್ತು ಲಾಜಿಸ್ಟಿಕ್ಸ್ ಬೆಂಬಲ ಸ್ವತ್ತುಗಳನ್ನು ಪೂರೈಸುವ ಪ್ರಸ್ತಾಪವನ್ನು ಅನುಮೋದಿಸಿದೆ.ಈ ಬೆಳವಣಿಗೆ ಅಮೆರಿಕ ಮತ್ತು ಭಾರತ ನಡುವಿನ ಕಾರ್ಯತಂತ್ರದ ಸಂಬಂಧಕ್ಕೆ ಅನುಗುಣವಾಗಿದೆ. 

ಪೆಂಟಗನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಮಿಲಿಟರಿ ಸರಬರಾಜುಗಳಿಗೆ ಅಗತ್ಯವಾದ ಪ್ರಮಾಣೀಕರಣವನ್ನು ನೀಡಿದೆ ಮತ್ತು ಸಂಭಾವ್ಯ ಮಾರಾಟದ ಬಗ್ಗೆ ಯುಎಸ್ ಕಾಂಗ್ರೆಸ್‌ಗೆ ತಿಳಿಸಿದೆ.

ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದಿಂದ ಮಿಲಿಟರಿ ಖರೀದಿಯನ್ನು ಹೆಚ್ಚಿಸುವಂತೆ ಒತ್ತಡ ಹೇರುತ್ತಿರುವ ಸಮಯದಲ್ಲಿ ಭಾರತಕ್ಕೆ ರಕ್ಷಣಾ ಸಾಮಗ್ರಿಗಳಿಗೆ ಅನುಮೋದನೆ ದೊರೆತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button