Latest

ಅತ್ಯುತ್ತಮ ನಿರೂಪಕನಾಗಿ ಎಮ್ಮಿ ಪ್ರಶಸ್ತಿ ಗೆದ್ದ ಬರಾಕ್ ಓಬಾಮಾ

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ಸರಣಿ ‘Our Great National Parks’ ನಲ್ಲಿ ನಿರೂಪಣೆ ಮಾಡಿದ್ದಕ್ಕಾಗಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಎಮ್ಮಿ ಪ್ರಶಸ್ತಿ ನೀಡಲಾಗಿದೆ.

ಈ ಪ್ರಶಸ್ತಿಯನ್ನು ಟೆಲಿವಿಜನ್ ಅಕಾಡೆಮಿ ಘೋಷಿಸಿದೆ. “44 ನೇ ಯುಎಸ್ ಅಧ್ಯಕ್ಷರು ಈಗ ಅತ್ಯುತ್ತಮ ನಿರೂಪಕರಾಗಿ ಎಮ್ಮಿ ವಿಜೇತರಾಗಿದ್ದಾರೆ” ಎಂದು ಟೆಲಿವಿಷನ್ ಅಕಾಡೆಮಿ ಟ್ವೀಟ್ ಮಾಡಿದೆ.

Home add -Advt

ಈಗಾಗಲೇ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆಗಳಾದ ‘The Audacity of Hope’ ಮತ್ತು ‘Dreams from My Father’ ಆಡಿಯೋ ಆವೃತ್ತಿಗಳಿಗಾಗಿ ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದು, ಅದರ ಬೆನ್ನಿಗೇ ಎಮ್ಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಂಡನ್ ನಲ್ಲಿ ಕದ್ದ ಕಾರು ಪಾಕಿಸ್ತಾನದಲ್ಲಿ ಪತ್ತೆ

Related Articles

Back to top button