ಪ್ರಗತಿವಾಹಿನಿ ಸುದ್ದಿ; ಲಕ್ನೋ: ಪತಿ ಕಿರುಕುಳಕ್ಕೆ, ಮಾನಸಿಕ ಅಥವಾ ದೈಹಿಕ ಹಿಂಸೆಗೆ ಇಲ್ಲವೇ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ವಿಚ್ಛೇದನ ಕೇಳುವುದು ಸಹಜ. ಆದರೆ ಪತಿಯ ಅತಿಯಾದ ಪ್ರೀತಿಗೆ ಇಲ್ಲೋರ್ವ ಮಹಿಳೆ ವಿಚ್ಛೇದನದ ಮೊರೆ ಹೋದ ವಿಚಿತ್ರ ಘಟನೆ ನಡೆದಿದೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ತನ್ನ ಪತಿ ಜಗಳವಾಡಲ್ಲ, ಹೆಚ್ಚು ಪ್ರೀತಿಸುತ್ತಾನೆ ಎಂಬ ಕಾರಣಕ್ಕೆ ವಿವಾಹವಾಗಿ 18 ತಿಂಗಳಲ್ಲೇ ಮಹಿಳೆ ವಿಚ್ಛೇದನದ ಮೊರೆ ಹೋಗಿದ್ದಾರೆ.
ಶರಿಯಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ವಿಚ್ಛೇದನಕ್ಕೆ ಕಾರಣ ಕೇಳಿದಾಗ ಪತಿ ಜಗಳವಾಡುವುದಿಲ್ಲ, ಹೆಚ್ಚು ಪ್ರೀತಿಸುತ್ತಾನೆ ಎಂದು ಮಹಿಳೆ ಹೇಳಿದ್ದಾಳೆ. ಇದನ್ನು ಕೇಳಿ ಸ್ವತಃ ನ್ಯಾಯಾಧೀಶರೇ ಅಚ್ಚರಿಗೊಂಡು, ವಿಚ್ಛೇದನಕ್ಕೆ ಇದು ಸಮರ್ಪಕ ಕಾರಣವಲ್ಲ ಎಂದು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಪತಿಯ ಪ್ರೀತಿಯನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪತಿ ಎಂದೂ ನನ್ನ ಮೇಲೆ ಕೂಗಾಡಲಿಲ್ಲ. ಯವುದೇ ವಿಷಯದ ಬಗ್ಗೆ ನನಗೆ ನಿರಾಸೆ ಮಾಡಿಲ್ಲ. ಇಂತಹ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಗುತ್ತಿದೆ. ಕೆಲವೊಮ್ಮೆ ಅವನೇ ಅಡುಗೆ ಮಾಡಿ ನನಗೆ ಬಡಿಸುತ್ತಾನೆ. ಮನೆ ಕೆಲಸ ಮಾಡಲು ಸಹ ಸಹಾಯ ಮಾಡುತ್ತಾನೆ. ವಿವಾಹವಾಗಿ 18 ತಿಂಗಳು ಕಳೆದರೂ, ಈ ವರೆಗೆ ಪತಿಯೊಂದಿಗೆ ಒಂದು ಬಾರಿಯೂ ಜಗಳವಾಡಿಲ್ಲ ಎಂದು ವರದಿಯಲ್ಲಿ ಮಹಿಳೆ ಉಲ್ಲೇಖಿಸಿದ್ದಾಳೆ. ಇದಕ್ಕೆ ಮಹಿಳೆಯ ಪತಿ ಪ್ರತಿಕ್ರಿಯಿಸಿದ್ದು, ಪತ್ನಿಯನ್ನು ಯಾವಾಗಲೂ ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕೆಂಬುದು ನನ್ನ ಆಸೆ. ಹೀಗಾಗಿ ಪ್ರಕರಣವನ್ನು ವಜಾಗೊಳಿಸಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ.
ಕೋರ್ಟ್ ಅರ್ಜಿ ತಿರಸ್ಕರಿಸಿದ ಬಳಿಕಮಹಿಳೆ, ಸ್ಥಳೀಯ ಪಂಚಾಯಿತಿಯಲ್ಲಿ ಚರ್ಚಿಸಿದ್ದು,ಊರಿನ ಮುಖಂಡರು ಸಹ ಇದನ್ನು ಒಪ್ಪಿಕೊಂಡಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ