ಪ್ರಗತಿವಾಹಿನಿ ಸುದ್ದಿ; ಶಿರಸಿ: ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿಗೆ ಬಂಡಲ್ ಗ್ರಾಮದ ಕಲ್ಲೇಶ್ವರ ದೇವಸ್ಥಾನ ಹಾಗೂ ಓಣಿ ವಿಗ್ನೇಶ್ವರ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳಾದ 32 ವರ್ಷದ ಲಿಂಗರಾಜು ಹಾಗೂ 25 ವರ್ಷದ ಪ್ರವೀಣ್ ಕುಮಾರ್ ನನ್ನು ಪೊಲಿಸರು ಬಂಧಿಸಿದ್ದಾರೆ.
ಪ್ರಕರಣದ ಒಂದನೇ ಆರೋಪಿ ಲಿಂಗರಾಜು ಈತನು ಮುಂಡಗೋಡ, ಹಳೇಬೀಡು, ಹುಬ್ಬಳ್ಳಿ, ವಿಜಾಪುರ, ಗದಗ, ಗೋಕಾಕ ಗಳಲ್ಲಿ ಬೈಕ್ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದು. ಮುಂಡಗೋಡ ಹಾಗೂ ಹಳೇಬೀಡು ಪೊಲೀಸ್ ಠಾಣಾ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 3 ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೇ ಈತನ ಮೇಲೆ ಈ ಹಿಂದೆ ಬೇಲೂರು ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಕಿ, ಮೂಡಬಿದಿರೆ, ಬಿಜಾಪುರಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದು 3 ನೇ ಆರೋಪಿ ಅಜಿತ್, ಸಾಂಗ್ಲಿ, ಮಹಾರಾಷ್ಟ್ರ ರಾಜ್ಯ ಈತನು ತಲೆಮಾರೆಸಿಕೊಂಡಿದ್ದಾನೆ.
ಈ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಬದರೀನಾಥ್, ಶಿರಸಿ ಉಪವಿಭಾಗದ DySP ರವಿ ಡಿ. ನಾಯ್ಕ್, ಶಿರಸಿ ವೃತ್ತದ CPI ರಾಮಚಂದ್ರ ನಾಯಕ ರವರ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಠಾಣೆಯ PSI ಈರಯ್ಯ, ಯಲ್ಲಾಪುರ ಠಾಣಾ ಮಹಿಳಾ PSI ಪ್ರಿಯಾಂಕಾ, ಸಿಬ್ಬಂದಿಗಳಾದ ಮಹದೇವ್ ನಾಯ್ಕ್, ಚೇತನ್ ಕುಮಾರ್, ಗಣಪತಿ, ಸುರೇಶ ಕಟ್ಟಿ, ಚೇತನ್, ಮಹಮ್ಮದ್ ಶಫಿ ಶೇಕ್, ಕೋಟೇಶ್, ಬಸವರಾಜ್ ಹಗರಿ, ವಿನೋದ್ ರೆಡ್ಡಿ, ಬಸವರಾಜ್ ಡಿ. ಕೆ., ಸುಧೀರ್ ಮಡಿವಾಳ ಪಾಲ್ಗೊಂಡಿದ್ದರು.
ಪೊಲೀಸ್ ಕಾನ್ಸ್ ಟೇಬಲ್ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ