Latest

ವಿಧಾನಸಭೆ ಚುನಾವಣೆ: ಅಭ್ಯರ್ಥಿಯ ಬಿಕಿನಿ ವಿಡಿಯೋ ವೈರಲ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ಬಾಲಿವುಡ್ ನಟಿ, ಮಾಡೆಲ್ ಅರ್ಚನಾ ಗೌತಮ್ ಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ಬೆನ್ನಲ್ಲೇ ಅರ್ಚನಾ ಅವರ ಬಿಕಿನಿ ವಿಡಿಯೋಗಳು ಭಾರಿ ವೈರಲ್ ಆಗಿವೆ.

ಮೀರಟ್ ನ ಹಸ್ತಿನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅರ್ಚನಾ ಗೌತಮ್ ಸ್ಪರ್ಧಿಸುತ್ತಿದ್ದಾರೆ. ಮಿಸ್ ಬಿಕಿನಿ ಇಂಡಿಯಾ-2018ರ ವಿಜೇತೆಯಾಗಿದ್ದ ಅರ್ಚನಾ ಗೌತಮ್ ಮಿಸ್ ಕಾಸ್ಮೋಸ್ ವರ್ಲ್ಡ್ 2018ರಲ್ಲಿ ಭಾರತವನ್ನು ಪ್ರನಿಧಿಸಿದ್ದರು. ಅಲ್ಲದೇ ಮೋಸ್ಟ್ ಟ್ಯಾಲೆಂಟ್ 2018 ಪ್ರಶಸ್ತಿಯನ್ನು ಗೆದ್ದಿದ್ದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಅರ್ಚನಾ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಇದೀಗ ಅವರ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆ ಹುಟ್ಟುಹಾಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಚನಾ ಗೌತಮ್, ನನ್ನ ರಾಜಕೀಯ ಜೀವನದೊಂದಿಗೆ ಜನರು ನನ್ನ ಮಾಡೆಲಿಂಗ್ ವೃತ್ತಿಯನ್ನು ಬೆರೆಸಬಾರದು. ನಾನು 2018ರಲ್ಲಿ ಮಿಸ್ ಬಿಕಿನಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. 2014ರಲ್ಲಿ ಮಿಸ್ ಉತ್ತರಪ್ರದೇಶ ಮತ್ತು 2018ರಲ್ಲಿ ಮಿಸ್ ಕಾಸ್ಮೊ ವರ್ಲ್ಡ್ ಆಗಿದ್ದೆ. ಮಾಡೆಲಿಂಗ್ ನನ್ನ ವೃತ್ತಿ. ಇದು ನನ್ನ ಪೊಲಿಟಿಕಲ್ ಕರಿಯರ್. ಜನರು ಎರಡನ್ನೂ ಬೆರೆಸಬಾರದು ಎಂದು ವಿನಂತಿಸುತ್ತೇನೆ ಎಂದಿದ್ದಾರೆ.
ದೇವಸ್ಥಾನದಲ್ಲಿ ಬೆತ್ತಲಾಗಿ ಬೈಕ್ ಗಳಿಗೆ ಬೆಂಕಿಯಿಟ್ಟ ವ್ಯಕ್ತಿ

Home add -Advt

Related Articles

Back to top button