ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಅಭಿಮಾನಿಗಳ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಬೇಕೆನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮಂಡ್ಯ ಅಭಿಮಾನಿಗಳು ಸಾಕಷ್ಟು ಒತ್ತಾಯ ಮಾಡಿದ್ದಾರೆ. ಅವರ ಅನಿಸಿಕೆಯನ್ನು ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡಬೇಕು ಅಂತ ತೀರ್ಮಾನಿಸಿದ್ದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಭೇಟಿ ಮಾಡಿದ್ದೇನೆ. ಅಭಿಮಾನಿಗಳ ಅಪೇಕ್ಷೆ ಏನೂ ಅನ್ನೋದನ್ನು ಸಿದ್ದರಾಮಯ್ಯ ಮುಂದೆ ಹೇಳಿದ್ದೇನೆ. ಸಿದ್ದರಾಮಯ್ಯ ಈ ಬಗ್ಗೆ ಯೋಚನೆ ಮಾಡುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಏನಿದೆ ಎನ್ನೋದನ್ನು ತಿಳಿದುಕೊಳ್ಳಬೇಕಿದೆ. ಹೀಗಾಗಿ ನಾನು ಅರ್ಜೆಂಟ್ ಮಾಡೋದಿಲ್ಲ. ಮೈತ್ರಿ ವಿಚಾರಕ್ಕೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಕಾದರೆ ಆಗ ನಾನು ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡ್ತೀನಿ. ಮಂಡ್ಯದ ಜನರ ಅಭಿಪ್ರಾಯವೇ ಹಂಡ್ರೆಡ್ ಪರ್ಸೆಂಟ್ ಅಂತಿಮ ಎಂದು ಅವರು ಹೇಳಿದರು.
ಏನೇ ಪರಿಸ್ಥಿತಿ ನಿರ್ಮಾಣವಾದರು ಕೂಡ ಜನರ ಅಭಿಪ್ರಾಯವೇ ಅಂತಿಮ. ಪಕ್ಷ ಹೆಲ್ಪ್ ಲೆಸ್ ಅನ್ನುವ ಸಂದರ್ಭ ಬಂದರೂ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡ್ತೀನಿ. ಮಂಡ್ಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮುಂದುವರೆಯುವುದಕ್ಕೆ ಸಾಧ್ಯವಿಲ್ಲ. ನಾಳೆ ನಾನು ಹೋಗುವುದು ವೀರ ಯೋಧರ ಮನೆಗೆ ಮಾತ್ರ. ರಾಜಕೀಯ ಕಾರಣಕ್ಕಾಗಿ ನಾನು ನಾಳೆ ಹೋಗುತ್ತಿರೋದಲ್ಲ. ನಾಳೆ ರಾಜಕೀಯ ಮಾತನಾಡೋದಿಲ್ಲ ಎಂದು ಸುಮಲತಾ ಹೇಳಿದರು.